Article:08 ದೇಶಕ್ಕೆ ಬೇಕಾಗಿರುವುದು ವಿವಿಧತೆಯಲ್ಲಿ ಸಾಮರಸ್ಯ
Article:08 ದೇಶಕ್ಕೆ ಬೇಕಾಗಿರುವುದು ವಿವಿಧತೆಯಲ್ಲಿ ಸಾಮರಸ್ಯ: ಈ ಬಾರಿಯ ಪ್ರಬಂಧದಲ್ಲಿ ‘ಇಂದು ಭಾರತಕ್ಕೆ ಬೇಕಾಗಿರುವುದು ವಿವಿಧತೆಯಲ್ಲಿ ಏಕತೆ ಅಲ್ಲ, ವಿವಿಧತೆಯಲ್ಲಿ ಸಾಮರಸ್ಯ’ ಎಂಬ ವಿಷಯವನ್ನು ಚರ್ಚಿಸಲಾಗಿದೆ.
ಇಂದಿನ ಧ್ರುವೀಕೃತ, ಸಂಕೀರ್ಣ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ವಿವಿಧತೆಯಲ್ಲಿ ಏಕತೆಗಿಂತ ಹೆಚ್ಚಾಗಿ ವಿವಿಧತೆಯಲ್ಲಿ ಸಾಮರಸ್ಯದ ಅಗತ್ಯವಿದೆ. ವಿವಿಧತೆಯಲ್ಲಿ ಏಕತೆಯು ಕೆಲವು ಸಲ ಬಲವಂತದ ಏಕತೆಯನ್ನು ಬಯಸುತ್ತದೆ. ಆದರೆ, ವಿವಿಧತೆಯಲ್ಲಿ ಸಾಮರಸ್ಯವು ವಿವಿಧ ಸಂಸ್ಕೃತಿಗಳು, ಧರ್ಮಗಳು, ಆಹಾರ ಪದ್ಧತಿಗಳು, ಆಚಾರ-ವಿಚಾರಗಳು, ಪ್ರಾದೇಶಿಕ ಮತ್ತು ಭಾಷೆಗಳ ವಿಶಿಷ್ಟ ಗುರುತುಗಳನ್ನು ಗೌರವಿಸುವ ಮತ್ತು ರಕ್ಷಿಸುವ ಪರಿಕಲ್ಪನೆಯಾಗಿದೆ. ಇದು ಬಲವಂತದ ಸಮೀಕರಣಕ್ಕಿಂತ ಶಾಂತಿಯುತ ಸಹಬಾಳ್ವೆಯನ್ನು ಬೆಳೆಸುತ್ತದೆ.
ವಿಷಯ ವಿವರಣೆ:
‘ವಿವಿಧತೆಯಲ್ಲಿ ಸಾಮರಸ್ಯ’ವು ವಿಭಿನ್ನ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ, ಆಚಾರ-ವಿಚಾರಗಳ ಜನರನ್ನು ಅವರಿರುವಂತೆಯೇ ಪರಸ್ಪರರು ಒಪ್ಪಿಕೊಳ್ಳುವುದನ್ನು, ಪ್ರಶಂಸಿಸುವುದನ್ನು ಒತ್ತಿಹೇಳುತ್ತದೆ. ಆದರೆ ‘ವಿವಿಧತೆಯಲ್ಲಿ ಏಕತೆ’ಯು ವಿಭಿನ್ನ ಗುಂಪುಗಳನ್ನು ಒಂದೇ ಸೂತ್ರದಡಿ ತರುವುದಕ್ಕೆ ಮಹತ್ವ ನೀಡುತ್ತದೆ. ಸಾಮರಸ್ಯವು ಹೆಚ್ಚು ಕ್ರಿಯಾತ್ಮಕ, ಹೊಂದಿಕೊಳ್ಳುವ ಮತ್ತು ಸಕ್ರಿಯ ವಿಧಾನವಾಗಿದೆ. ಆದರೆ ಏಕತೆಯು ಹೆಚ್ಚಾಗಿ ಬಲವಂತದ ವಿಧಾನವಾಗಿದೆ.
ವಿವಿಧತೆಯಲ್ಲಿ ಸಾಮರಸ್ಯದ ಅನುಕೂಲಗಳು:
ಉದ್ವಿಗ್ನತೆಗಳನ್ನು ನಿರ್ವಹಿಸುವುದು ಸುಲಭ: ಭಾರತದಲ್ಲಿ ಇತ್ತೀಚೆಗೆ ಜಾತಿ, ಧಾರ್ಮಿಕ ಮತ್ತು ಪ್ರಾದೇಶಿಕ ಸ್ತರಗಳಲ್ಲಿ ಸಾಮಾಜಿಕ ಉದ್ವಿಗ್ನತೆಗಳು ಹೆಚ್ಚುತ್ತಿವೆ. ಜಾತಿ ಆಧರಿತ ತಾರತಮ್ಯ, ಪ್ರಾದೇಶಿಕ ಪ್ರತ್ಯೇಕತಾವಾದಿ ಚಳವಳಿಗಳು ಮತ್ತು ಕೋಮು ಹಿಂಸಾಚಾರದಿಂದ ರಾಷ್ಟ್ರೀಯ ಒಗ್ಗಟ್ಟಿಗೆ ಗಂಭೀರ ಬೆದರಿಕೆ ಇದೆ. ವಿವಿಧತೆಯಲ್ಲಿ ಸಾಮರಸ್ಯವು ಈ ಸಮಸ್ಯೆಗಳಿಗೆ ಹೆಚ್ಚು ಅತ್ಯಾಧುನಿಕ ಪರಿಹಾರವನ್ನು ಒದಗಿಸುತ್ತದೆ. ಜನರಲ್ಲಿ ಗೌರವ ಮತ್ತು ತಿಳಿವಳಿಕೆಯನ್ನು ಪ್ರೋತ್ಸಾಹಿಸುವ ಮೂಲಕ, ಗುಂಪುಗಳ ನಡುವೆ ಸಂವಹನವನ್ನು ಹೆಚ್ಚಿಸುವ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಾಧ್ಯವಿದೆ.
ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ:
ಭಾರತವು ವಿವಿಧ ಸಾಮಾಜಿಕ ವರ್ಗಗಳು ಮತ್ತು ಭೌಗೋಳಿಕ ಪ್ರದೇಶಗಳ ನಡುವೆ ಆರ್ಥಿಕ ಬೆಳವಣಿಗೆಯ ಅಸಮಾನತೆಯನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆಯು ಇಡೀ ದೇಶದ ಬೆಳವಣಿಗೆಯ ಮೇಲೆ ಗಮನ ಹರಿಸುವುದರಿಂದ ಆರ್ಥಿಕ ಅಸಮಾನತೆಗಳನ್ನು ನಿರ್ಲಕ್ಷಿಸಬಹುದಾಗಿದೆ. ಆದರೆ, ವಿವಿಧತೆಯಲ್ಲಿ ಸಾಮರಸ್ಯದ ತಂತ್ರವು ಹೆಚ್ಚು ಅಂತರ್ಗತ ಆರ್ಥಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ವಿವಿಧ ಪ್ರದೇಶಗಳು ಮತ್ತು ಸಮುದಾಯಗಳ – ವಿಶೇಷ ಪ್ರತಿಭೆಗಳು ಮತ್ತು ಕೊಡುಗೆಗಳನ್ನು ಶಾಪಿಸುವ ಮೂಲಕ ಪ್ರಾದೇಶಿಕ ಅಸಮಾನತೆಗಳನ್ನು ಸರಿಪಡಿಸಿ ನ್ಯಾಯಯುತ ಬೆಳವಣಿಗೆಯನ್ನು ಖಚಿತಪಡಿಸಬಹುದಾಗಿದೆ.
ಭಾರತದ ಮೃದು ಶಕ್ತಿ ಮತ್ತು ಅಂತಾರಾಷ್ಟ್ರೀಯ ಪ್ರಭಾವವನ್ನು ಹೆಚ್ಚಿಸುವುದು:
ದಿನದಿಂದ ದಿನಕ್ಕೆ ಹೆಚ್ಚು ಸಂಪರ್ಕ ಹೊಂದುತ್ತಿರುವ ಜಗತ್ತಿನಲ್ಲಿ ಭಾರತದ ವೈವಿಧ್ಯತೆಯು ಅದರ ವಿದೇಶಾಂಗ ನೀತಿಯಲ್ಲಿ ಹೆಚ್ಚು ಪ್ರಯೋಜನವಾಗಬಹುದು.
ಭಾರತವು ತನ್ನ ಸೈದ್ಧಾಂತಿಕ – ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳನ್ನು ನಿವಾರಿಸಬಲ್ಲದು ಎಂಬುದನ್ನು ಸಾಬೀತುಪಡಿಸುವ ಮೂಲಕ ಜಗತ್ತಿನ ಕ್ರಿಶ್ಚಿಯನ್ ಮತ್ತು ” ಇಸ್ಲಾಮಿಕ್ ದೇಶಗಳ ಮನ್ನಣೆ ಪಡೆಯಬಹುದು.
ನಾವೀನ್ಯತೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವುದು:
ವಿಭಿನ್ನ – ದೃಷ್ಟಿಕೋನಗಳು, ಅನುಭವಗಳು ಮತ್ತು ಆಲೋಚನಾ ವಿಧಾನಗಳು ಸಂಕೀರ್ಣ ಸಮಸ್ಯೆಗಳಿಗೆ ಹೊಸ ಉತ್ತರಗಳನ್ನು ಹೊಂದಿರಬಹುದು. ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಅನೇಕ ಕ್ಷೇತ್ರಗಳ ಮೇಲೆ ಇದು ಪ್ರಮುಖ ಪರಿಣಾಮಗಳನ್ನು ಬೀರಬಹುದು.
ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬೆಂಬಲಿಸುವುದು:
ಭಾರತದ – ಪ್ರಜಾಪ್ರಭುತ್ವವು ಬಲಿಷ್ಠವಾಗಿದ್ದರೂ, ಎಲ್ಲಾ ಸಮುದಾಯಗಳ – ಸಮಾನ ಪ್ರಾತಿನಿಧ್ಯ ಮತ್ತು ಒಳಗೊಳ್ಳುವಿಕೆಯನ್ನು ಹೊಂದಿಲ್ಲ.
ಕೆಲವೊಮ್ಮೆ ಒಂದೇ ರಾಷ್ಟ್ರೀಯ ಗುರುತನ್ನು ಒತ್ತಿಹೇಳುವ ಧಾವಂತದಲ್ಲಿ ಹಿಂದುಳಿದ ಗುಂಪುಗಳ ನಿರ್ದಿಷ್ಟ ಅವಶ್ಯಕತೆಗಳು – ಮತ್ತು ದೃಷ್ಟಿಕೋನಗಳನ್ನು ನಿರ್ಲಕ್ಷಿಸಬಹುದು. ವಿವಿಧತೆಯಲ್ಲಿ ಸಾಮರಸ್ಯವು ಹೆಚ್ಚು ಸಮಗ್ರ ರಾಜಕೀಯ ಚರ್ಚೆಯನ್ನು ಪ್ರೋತ್ಸಾಹಿಸುವುದರಿಂದ ಇದು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಬಲಪಡಿಸುತ್ತದೆ.
ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು:
ಭಾರತದ ವಿಶಾಲವಾದ ಸಾಂಸ್ಕೃತಿಕ ಪರಂಪರೆಯು ಅದರ -56 ಅತ್ಯುತ್ತಮ ಶಕ್ತಿಗಳಲ್ಲಿ ಒಂದಾಗಿದೆ. ವಿವಿಧತೆಯಲ್ಲಿ ಏಕತೆಯು ಕೆಲವೊಮ್ಮೆ ಸ್ಥಳೀಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ಮೂಲೆಗೆ ತಳ್ಳಬಹುದು. ಆದರೆ, ವಿವಿಧತೆಯಲ್ಲಿ ಸಾಮರಸ್ಯ ವಿಧಾನದ ಅಡಿಯಲ್ಲಿ ಎಲ್ಲಾ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಸಮಾನವಾಗಿ ಮೌಲ್ವಿಕರಿಸಲಾಗುತ್ತದೆ.
ವಿವಿಧತೆಯಲ್ಲಿ ಸಾಮರಸ್ಯವನ್ನು ತರಲು ಮಾರ್ಗೋಪಾಯಗಳು:
- ಶಿಕ್ಷಣದಲ್ಲಿ ಸುಧಾರಣೆಗಳು:
ಸಮಾಜದ ಮನೋಭಾವಗಳನ್ನು ರೂಪಿಸುವಲ್ಲಿ, ಶಿಕ್ಷಣವು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ, ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಈ ಕೆಳಗಿನ ಬದಲಾವಣೆಗಳನ್ನು ತರುವುದು ಸೂಕ್ತವಾಗಿದೆ.
ಬಹುಸಂಸ್ಕೃತಿಯ ಪಠ್ಯಕ್ರಮ:
ಚಿಕ್ಕ ವಯಸ್ಸಿನಿಂದಲೇ, ಭಾರತದ ಅನೇಕ ಭಾಷೆಗಳು, ಪದ್ಧತಿಗಳು ಮತ್ತು ಸಂಸ್ಕೃತಿಗಳಿಗೆ ಮಕ್ಕಳನ್ನು ಒಡ್ಡಿಕೊಳ್ಳುವಂತೆ ಮಾಡಬೇಕು.
ಸಾಂಸ್ಕೃತಿಕ ವಿನಿಮಯ:
ಭಾರತೀಯ ಪ್ರದೇಶಗಳ ನಡುವೆ ಸಂಸ್ಕೃತಿಕ ವಿನಿಮಯಕ್ಕಾಗಿ ಉಪಕ್ರಮಗಳನ್ನು ಪ್ರೋತ್ಸಾಹಿಸುವುದು.
ಬಹುಭಾಷಾ ಶಿಕ್ಷಣ:
ಬಹುಭಾಷಾ ಶಿಕ್ಷಣದ ಮೂಲಕ ಹಲವಾರು
ಭಾರತೀಯ ಭಾಷೆ ಕಲಿಕೆಗೆ ಉತ್ತೇಜನ.
2.ಸಂಸ್ಕೃತಿ ಮತ್ತು ಮಾಧ್ಯಮ:
ಸಾರ್ವಜನಿಕ ಅಭಿಪ್ರಾಯಗಳನ್ನು ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯಿಂದ ರೂಪಿಸಲಾಗಿದೆ. ವಿವಿಧತೆಯ ನಡುವೆ ಸಾಮರಸ್ಯವನ್ನು ಉತ್ತೇಜಿಸಲು ಈ ಕೆಳಗಿನ ಕ್ರಮಗಳು ಸೂಕ್ತ.
ಪ್ರಾತಿನಿಧ್ಯದ ವೈವಿಧ್ಯತೆ:
ಮನರಂಜನೆ ಮತ್ತು ಮಾಧ್ಯಮಗಳಲ್ಲಿ ಅನೇಕ ಸಮುದಾಯಗಳನ್ನು ಪ್ರತಿನಿಧಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
ಸಾಂಸ್ಕೃತಿಕ ಉತ್ಸವಗಳು:
ಭಾರತದಲ್ಲಿನ ವೈವಿಧ್ಯತೆಯ ಹಬ್ಬಗಳು ಮತ್ತು ಆಚರಣೆಗಳನ್ನು ಪ್ರೋತ್ಸಾಹಿಸುವುದು.
- ನೀತಿಗಳ ಮೂಲಕ ಸಾಮರಸ್ಯವನ್ನು ಖಾತರಿಪಡಿಸುವುದು: ವಿವಿಧತೆಯಲ್ಲಿ ಸಾಮರಸ್ಯದ ಸಾಕಾರಕ್ಕೆ ಸರಕಾರ ಈ ಕೆಳಗಿನ ನೀತಿಗಳನ್ನು ರೂಪಿಸುವುದು ಅಗತ್ಯವಾಗಿದೆ.
ಕಾನೂನು ಸುಧಾರಣೆ:
ಹಿಂದುಳಿದ ಗುಂಪುಗಳ ಪ್ರಾತಿನಿಧ್ಯವನ್ನು ಬೆಂಬಲಿಸುವ ಕಾನೂನುಗಳನ್ನು ಸುಧಾರಿಸುವುದು.
ಸಾಂಸ್ಕೃತಿಕ ಸಂರಕ್ಷಣೆ:
ಅನೇಕ ಸಾಂಸ್ಕೃತಿಕ ಪದ್ಧತಿಗಳನ್ನು ರಕ್ಷಿಸಲು ಮತ್ತು ಮುನ್ನಡೆಸಲು ಕ್ರಮಗಳನ್ನು ಕೈಗೊಳ್ಳುವುದು.
ಅಂತರ್‌ಧರ್ಮ ಮತ್ತು ಅಂತರ್ ಸಾಂಸ್ಕೃತಿಕ ಸಂವಾದಗಳು:
ಅನೇಕ ಸಮುದಾಯಗಳ ನಡುವೆ ಸಂವಹನಕ್ಕಾಗಿ ವೇದಿಕೆಗಳನ್ನು ಒದಗಿಸುವುದು.
- ಸಾಮಾಜಿಕ ಚಳವಳಿಗಳು ಮತ್ತು ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆ:
ಭಾರತದ ಇತಿಹಾಸದಲ್ಲಿ ಹಲವಾರು ಸಂತರು,ಶರಣರು, ಸಮಾಜ ಸುಧಾರಕರು ಕಾಲಕಾಲಕ್ಕೆ ಕೈಗೊಂಡ ಚಳವಳಿಗಳು ಸಮುದಾಯಗಳ ನಡುವೆ ಸಾಮರಸ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ಈಗ ಮತ್ತೆ ಅವುಗಳ ಅಗತ್ಯವಿದೆ.
- ಆರ್ಥಿಕ ನೀತಿಗಳು:
ವಿವಿಧತೆಯಲ್ಲಿ ಸಾಮರಸ್ಯವನ್ನು ಉತ್ತೇಜಿಸಲು ಈ ಕೆಳಗಿನ ರೀತಿಯ ಆರ್ಥಿಕ ನೀತಿಗಳ ಅಗತ್ಯವಿದೆ.
ಆರ್ಥಿಕವಾಗಿ ಅಭಿವೃದ್ಧಿಯಾಗದ ಪ್ರದೇಶಗಳ ಕಡೆಗೆ ಗಮನಹರಿಸಬೇಕು.
ಸಮುದಾಯಗಳ ವೈವಿಧ್ಯತೆಗೆ ಅನುಗುಣವಾಗಿ ಕೌಶಲಾಭಿವೃದ್ಧಿ ಉಪಕ್ರಮಗಳನ್ನು ಆರಂಭಿಸಬೇಕು.
ಉದ್ಯಮ ಸಂಸ್ಥೆಗಳು ನೇಮಕಾತಿಗಳಲ್ಲಿ ಎಲ್ಲ ಸಮುದಾಯಗಳಿಗೆ ಸಮಾನ ಅವಕಾಶ ನೀಡಬೇಕು.
- ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವುದು:
ಆಧುನಿಕ ದಿನಗಳಲ್ಲಿ ಆನ್‌ಲೈನ್ ವೇದಿಕೆಗಳು ಶಾಂತಿಯನ್ನು ಉತ್ತೇಜಿಸುವ ಪರಿಣಾಮಕಾರಿ ಸಾಧನಗಳಾಗಬಹುದು.

ಉಪಸಂಹಾರ:
ಸ್ವಾತಂತ್ರ್ಯಾನಂತರದ ಭಾರತವು ವಿವಿಧತೆಯಲ್ಲಿ ಏಕತೆಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿದೆ. ಆದರೆ ಇಪ್ಪತ್ತೊಂದನೇ ಶತಮಾನದ ಸಂಕೀರ್ಣತೆಯು ಹೆಚ್ಚು ಅತ್ಯಾಧುನಿಕ ಕಾರ್ಯತಂತ್ರವನ್ನು ಬಯಸುತ್ತದೆ. ವಿವಿಧತೆಯಲ್ಲಿ ಸಾಮರಸ್ಯವು ಪ್ರಸ್ತುತ ಸಮಸ್ಯೆಗಳನ್ನು ಪರಿಹರಿಸಲು ಪ್ರಮುಖ ಸಾಧನವಾಗಬಹುದಾಗಿದೆ. ವಿವಿಧತೆಯಲ್ಲಿ ಸಾಮರಸ್ಯ ಸಾಧಿಸಲು ಪರಿಶ್ರಮ, ಸಹಿಷ್ಣುತೆ ಮತ್ತು ಕಠಿಣ ಮಾತುಕತೆಗಳನ್ನು ನಡೆಸುವುದು ಅಗತ್ಯವಾಗಿದೆ.