KREIS 2024- SECOND ROUND ALLOTMENT LIST RELEASED

ಕರ್ನಾಟಕ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ, ಇದೀಗ ಕೆಇಎ ಎರಡನೇ ಸುತ್ತಿನ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವಿದ್ಯಾರ್ಥಿಗಳು ಕೆಇಎ ವೇಳಾಪಟ್ಟಿ ಪ್ರಕಾರ ನಿಗದಿತ ದಿನಾಂಕದೊಳಗೆ ಪ್ರವೇಶ ಪಡೆಯಬೇಕಾಗುತ್ತದೆ.

WhatsApp Group Join Now
Telegram Group Join Now
  • ಕೆಆರ್‌ಇಐಎಸ್ ಶಾಲೆಗಳ ಪ್ರವೇಶಕ್ಕೆ ಎರಡನೇ ಸುತ್ತಿನ ಆಯ್ಕೆಪಟ್ಟಿ ಬಿಡುಗಡೆ.
  • ಫಲಿತಾಂಶ ಚೆಕ್‌ ಮಾಡುವ ಲಿಂಕ್ ವಿಧಾನ ಇಲ್ಲಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿವಿಧ ವಸತಿ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗೆ ಸಂಬಂಧ, ಇದೀಗ ಎರಡನೇ ಸುತ್ತಿನ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಈ ತರಗತಿ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಈಗ ಜಿಲ್ಲಾವಾರು ವಸತಿ ಶಾಲೆಗಳ ಸೀಟು ಹಂಚಿಕೆಯನ್ನು ಚೆಕ್‌ ಮಾಡಿಕೊಳ್ಳಬಹುದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಅಡಿಯ ವಸತಿ ಶಿಕ್ಷಣ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳ ಆಯ್ಕೆಗಾಗಿ ಕಳೆದ ಫೆಬ್ರುವರಿ ತಿಂಗಳ 18 ರಂದು ಪ್ರವೇಶ ಪರೀಕ್ಷೆ ನಡೆಸಿತ್ತು. ಹಾಗೂ ಈ ಹಿಂದೆಯೇ ಮೆರಿಟ್‌ ಲಿಸ್ಟ್‌ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಜಿಲ್ಲಾವಾರು ಹಾಗೂ ವಸತಿ ಶಾಲಾವಾರು ಸೀಟು ಹಂಚಿಕೆ ರಿಸಲ್ಟ್‌ ಅನ್ನು ಬಿಡುಗಡೆ ಮಾಡಿದೆ. ಈ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಾವು ಯಾವ ಜಿಲ್ಲೆಯಲ್ಲಿ ಪ್ರವೇಶಕ್ಕೆ ಆಯ್ಕೆ ಮಾಡಿರುತ್ತೀರೋ ಆ ಜಿಲ್ಲೆಯ ಸೀಟು ಹಂಚಿಕೆ ರಿಸಲ್ಟ್‌ ಲಿಂಕ್‌ ಅನ್ನು ಕೆಇಎ ವೆಬ್‌ಸೈಟ್‌ನಲ್ಲಿ ಕ್ಲಿಕ್ ಮಾಡುವ ಮೂಲಕ ಚೆಕ್ ಮಾಡಬಹುದು.

ಕೆಆರ್‌ಇಐಎಸ್‌ 6ನೇ ತರಗತಿ ಸೀಟು ಹಂಚಿಕೆ ಫಲಿತಾಂಶ ಚೆಕ್‌ ಮಾಡುವುದು ಹೇಗೆ?

  • – ಕೆಇಎ ವೆಬ್‌ಸೈಟ್‌ https://cetonline.karnataka.gov.in/kea/ ಗೆ ಭೇಟಿ ನೀಡಿ.
  • – ತೆರೆದ ವೆಬ್‌ಪೇಜ್‌ನಲ್ಲಿ ‘ಇತ್ತೀಚಿನ ಪ್ರಕಟಣೆಗಳು’ ಎಂದಿರುವಲ್ಲಿ ಗಮನಿಸಿ.
  • – ‘KREIS 2024-ಎರಡನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ’ ಎಂದು ನೀಡಲಾಗಿದ್ದು, ಅದರ ಜತೆಗೆ ಜಿಲ್ಲೆಗಳ ಸೀಟು ಹಂಚಿಕೆ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ.
  • – ನೀವು ಅರ್ಜಿ ಸಲ್ಲಿಸಿ, ಯಾವ ಜಿಲ್ಲೆಯಲ್ಲಿ ಪ್ರವೇಶಕ್ಕೆ ಆಯ್ಕೆ ಮಾಡಿರುತ್ತೀರೋ ಆ ಜಿಲ್ಲೆ ಲಿಂಕ್‌ ಕ್ಲಿಕ್ ಮಾಡಿ.
  • – ನಂತರ ಸಿಇಟಿ ನಂಬರ್, ಹೆಸರು ಪ್ರಕಾರ ಸೀಟು ಹಂಚಿಕೆ ಆಗಿರುವುದನ್ನು ಚೆಕ್‌ ಮಾಡಿಕೊಳ್ಳಿ.

ಯಾವೆಲ್ಲ KREIS ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿ ನೀಡಲಾಗುತ್ತದೆ?

  1. ಏಕಲವ್ಯ ಮಾದರಿ ವಸತಿ ಶಾಲೆ
  2. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
  3. ಮೊರಾರ್ಜಿ ದೇಸಾಯಿ ವಸತಿ ಶಾಲೆ
  4. ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ
  5. ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ
  6. ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
  7. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
  8. ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ
  9. ಕವಿರನ್ನ ವಸತಿ ಶಾಲೆ
  10. ಗಾಂಧಿತತ್ವ ವಸತಿ ಶಾಲೆ
  11. ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳು

ಪ್ರವೇಶ ಪಡೆಯುವ ಪ್ರಕ್ರಿಯೆ

ಕೆಇಎ, ಶೀಘ್ರದಲ್ಲೇ ಮೊದಲ ಸುತ್ತಿನ ಸೀಟು ಹಂಚಿಕೆ ಪಡೆದವರು ಆಯಾ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ವೇಳಾಪಟ್ಟಿಯನ್ನು ಹಾಗೂ ಸೂಚನೆಗಳನ್ನು ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಆಧಾರ್ ಕಾರ್ಡ್‌, 5ನೇ ತರಗತಿಯ ಉತ್ತೀರ್ಣ ಸರ್ಟಿಫಿಕೇಟ್‌, ಮೀಸಲಾತಿ ಪ್ರಮಾಣ ಪತ್ರಗಳು, ಇತರೆ ಅಗತ್ಯವಾಗಿರುತ್ತವೆ.

ಎರಡನೇ ಹಂತದ ಸೀಟು ಹಂಚಿಕೆ ಪಟ್ಟಿ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿCLICK HERE

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!