KGID Bonus Announcement

ಕೆ.ಜಿ.ಐ.ಡಿ ಬೋನಸ್ ಘೋಷಣೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 2018 ರಿಂದ 2020ರ ಅವಧಿಯವರೆಗೆ ಬಾಕಿ ಇದ್ದ 2 ವರ್ಷಗಳ ಕೆಜಿಐಡಿ ಬೋನಸ್‌ನ್ನು ಪ್ರತಿ ವರ್ಷ ರೂ. 1000ಕ್ಕೆ 80 ರೂಪಾಯಿಗಳ ಲಾಭಾಂಶವನ್ನು ನೀಡಲು ಇಂದು ದಿನಾಂಕ:04-07-2024 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.

1.ಚಾಲ್ತಿಯಲ್ಲಿರುವ ಪಾಲಿಸಿಗಳ ಸಂಖ್ಯೆ: 12,97,054

2.ವಿಮಾ ಭರವಸೆ ಮೊತ್ತ : ರೂ.32.271.80 ಕೋಟಿಗಳು.

3.ಪ್ರತ್ಯಾವರ್ತಿ ಅಧಿಲಾಭಾಂಶ: ರೂ.11.956.56 ಕೋಟಿಗಳು.

4.ವಾರ್ಷಿಕ ಪ್ರೀಮಿಯಂ: ರೂ.1.631.58 ಕೋಟಿಗಳು

5.ಜೀವ ವಿಮಾ ನಿಧಿಯ ಶಿಲ್ಕು: ರೂ.15.164.43 ಕೋಟಿಗಳು

6. ವಿಮಾ ವ್ಯವಹಾರದ ಮೇಲಿನ ನಿವ್ವಳ ಹೊಣೆಗಾರಿಕೆ ರೂ.5,163.48 ಕೋಟಿಗಳು.

7.ಮೌಲ್ಯಮಾಪನದ ಹೆಚ್ಚುವರಿ: ರೂ.1.769.28 ಕೋಟಿಗಳು.

ನಿರ್ಣಯಗಳು:

ದಿನಾಂಕ: 01.04.2028 ರಿಂದ 31.03.2020 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಲಾಭಾಂಶ (ಬೋನಸ್) ಘೋಷಿಸಲು;

ಮತ್ತು

ಅವಧಿ ಪೂರ್ಣ, ಮರಣಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ: 01.04.2020 ರಿಂದ 31.03.2022 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಮಧ್ಯಂತರ ಲಾಭಾಂಶವನ್ನು (ಇಂಟರೀಮ್ ಬೋನಸ್) ಘೋಷಿಸಲು; ಸಚಿವ ಸಂಪುಟ ನಿರ್ಣಯಿಸಿದೆ.

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!