Karnataka Civil Services (Classification, Control and Appeal) (Amendment) Rules, 2025.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) (ತಿದ್ದುಪಡಿ) ನಿಯಮಗಳು, 2025.
ಅಧಿಸೂಚನೆ:
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವುದಕ್ಕೆ ದಿನಾಂಕ:25.02.2025ರ ಅಧಿಸೂಚನೆ ಸಂಖ್ಯೆ: ಸಿಆಸುಇ 80 ಸೇಇವಿ 2024 ರಲ್ಲಿ ಪ್ರಕಟಿಸಿರುವ ಈ ಮುಂದಿನ ನಿಯಮಗಳ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಇದರ ಪ್ರಕಟಣೆಯ ದಿನಾಂಕದಿಂದ 15 ದಿನಗಳೊಳಗಾಗಿ ಅದರಿಂದ ಬಾಧಿತರಾಗುವ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಆಹ್ವಾನಿಸಿ ದಿನಾಂಕ:25.02.2025ರ ಕರ್ನಾಟಕ ವಿಶೇಷ ರಾಜ್ಯಪತ್ರದ ಭಾಗ – ೪ಎ (ಸಂಖ್ಯೆ: ೧೧೮) ರಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 3ನೇ ಪ್ರಕರಣದ (2)ನೇ ಉಪ ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ; ಸದರಿ ವಿಶೇಷ ರಾಜ್ಯ ಪತ್ರವನ್ನು ದಿನಾಂಕ:25.02.2025ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ; ಮತ್ತು, ಸದರಿ ಕರಡಿನ ಬಗ್ಗೆ ಯಾವುದೇ ಆಕ್ಷೇಪಣೆ/ಸಲಹೆಗಳು ಸ್ವೀಕೃತವಾಗದಿರುವುದರಿಂದ; ಈಗ, ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ, 14)ರ 8ನೇ ಪ್ರಕರಣದೊಂದಿಗೆ ಓದಿಕೊಂಡ 3ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ ಎಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ
(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.
(2) ಅವುಗಳು 1ನೇ ಜುಲೈ 2022 ರಿಂದ ಜಾರಿಗೆ ಬಂದಿವೆ ಎಂದು ಭಾವಿಸತಕ್ಕದ್ದು.
2. 5 ನೇ ನಿಯಮದ ತಿದ್ದುಪಡಿ: – ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ (ಇಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 5 ನೇ ನಿಯಮದಲ್ಲಿ (3)ನೇ ಉಪನಿಯಮದ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು:-
3. ರಾಜ್ಯ ಸಿವಿಲ್ ಸೇವೆಗಳು
(ಎ) ಸಮೂಹ ‘ಎ’ ಯು ರೂ 83700-1900-85600-2300-99400-2700-115600-3100-134200-3500-155200 ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಬಿ) ಸಮೂಹ ‘ಬಿ ‘ ಯು ರೂ 65950-1650-74200-1900-85600-2300-99400-2700-115600-3100-124900ರ ಮತ್ತು ಅದಕ್ಕೂ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ, ರೂ.83700-1900-85600-2300-99400-2700-115600-3100-134200-3500-155200 ಕ್ಕಿಂತ ಕೆಳಗಿನ ವೇತನ ಶ್ರೇಣಿಗಳನ್ನು ಒಳಗೊಂಡಿರತಕ್ಕದ್ದು.
(ಸಿ) ಸಮೂಹ ‘ಸಿ ‘ ಯು ರೂ.34100-800-35700-900-39300-1000-43300-1125-47800-1250-52800-1375-58300-1500-64300-1650-676000 ವೇತನ ಶ್ರೇಣಿಗಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು, ಆದರೆ ರೂ. 65950-1650-74200-1900-85600-2300-99400-2700-115600-3100-124900ಕ್ಕಿಂತ ಕೆಳಗಿನ ವೇತನ ಶ್ರೇಣಿಯನ್ನು ಹೊಂದಿರುವ, ಆದರೆ, ಅನುಸೂಚಿ-IV ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿದ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
(ಡಿ) ಸಮೂಹ “ಡಿ” ಯು ಅನುಸೂಚಿ- IV ರಲ್ಲಿ ನಿರ್ದಿಷ್ಟ ಪಡಿಸಿರುವ ಹುದ್ದೆಗಳನ್ನು ಮತ್ತು ರೂ. 27000-650-29600-725-32500-800-35700-900-39300-1000-43300-1125-46675 ಕ್ಕಿಂತ ಮೇಲ್ಪಟ್ಟ ವೇತನ ಶ್ರೇಣಿಗಳನ್ನು ಆದರೆ ರೂ 34100-800-35700-900-39300-1000-43300-1125-47800-1250-52800-1375-58300-1500-64300-1650-6760003 ธัก ಶ್ರೇಣಿಯನ್ನು ಹೊಂದಿರುವ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು.
ವಿವರಣೆ: ಈ ಉಪನಿಯಮದ ಉದ್ದೇಶಗಳಿಗಾಗಿ ವೇತನ ಶ್ರೇಣಿ” ಎಂದರೆ ಕರ್ನಾಟಕ ಸಿವಿಲ್ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024 ರಲ್ಲಿ ಮತ್ತು ಅದಕ್ಕೆ ಸಂಬಂಧಿಸಿದ ಆದೇಶಗಳಲ್ಲಿ ಹೇಳಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಪರಿಷ್ಕೃತ ವೇತನ ಶ್ರೇಣಿ.
3. 9ನೇ ನಿಯಮದ ತಿದ್ದುಪಡಿ: ಸದರಿ ನಿಯಮಗಳ 9ನೇ ನಿಯಮದ (2)ನೇ ಉಪನಿಯಮದಲ್ಲಿ (1) (ಬಿಬಿ) ಖಂಡದಲ್ಲಿ “90500 – 123300 ರೂ.ಗಳಿಗಿಂತ ಕಡಿಮೆಯಿಲ್ಲದ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ.144700-197200 ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 90200 -159200ಗಳಿಗಿಂತ ಹೆಚ್ಚಲ್ಲದ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಷ್ಠಾಪಿಸತಕ್ಕದ್ದು,
(ii) (ಬಿಬಿಬಿ) ಖಂಡದಲ್ಲಿ , “90500-123300 ಗಳಿಗಿಂತ ಕಡಿಮೆ ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 144700-197200ಗಳಿಗಿಂತ ಕಡಿಮೆ ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು.
iii) (ಬಿಬಿಬಿ-1) ಖಂಡದಲ್ಲಿ “74400 -109600ರ ವೇತನ ಶ್ರೇಣಿಯಲ್ಲಿರುವ” ಎಂಬ ಪದಗಳಿಗೆ ಮತ್ತು ಅಂಕಿಗಳಿಗೆ ಬದಲಾಗಿ “ರೂ. 118700 – 175200ರ ವೇತನ ಶ್ರೇಣಿಯಲ್ಲಿರುವ ” ಎಂಬ ಪದಗಳನ್ನು ಮತ್ತು ಅಂಕಿಗಳನ್ನು ಪ್ರತಿಷ್ಠಾಪಿಸತಕ್ಕದ್ದು.
4. 10ನೇ ನಿಯಮದ ತಿದ್ದುಪಡಿ: ಸದರಿ ನಿಯಮಗಳ 10ನೇ ನಿಯಮದ (8)ನೇ ಉಪ ನಿಯಮದಲ್ಲಿನ ಕ್ರಮ ಸಂಖ್ಯೆ (10)ರಲ್ಲಿನ 74400 -109600″ ಎಂಬ ಅಂಕಿಗಳ ಬದಲಾಗಿ “118700 -175200” ಎಂಬ ಅಂಕಿ ಅಂಶಗಳನ್ನು ಪ್ರತಿಷ್ಠಾಪಿಸಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ನಾಗರತ್ನ ವಿ.ಪಾಟಿಲ್)
ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)
CLICK HERE TO DOWNLOAD NOTIFICATION