Dr. Shamanur Shivashankarappa Janakalyan Trust (SSJKT) Scholarship 2024

ದಾವಣಗೆರೆ ಹಿರಿಯ ಶಾಸಕ, ಉದ್ಯಮಿ, ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಶಾಮನೂರು ಶಿವಶಂಕರಪ್ಪ ಹೆಸರಿನಲ್ಲಿ ಸ್ಥಾಪಿಸಿರುವ ಡಾ. ಶಾಮನೂರು ಶಿವಶಂಕರಪ್ಪ ಜನ ಕಲ್ಯಾಣ ಟ್ರಸ್ಟ್‌ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ರಾಜ್ಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಕಳೆದ ವರ್ಷ 900 ವಿದ್ಯಾರ್ಥಿ ವೇತನಗಳನ್ನು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿದ್ದು, 2024-25ನೇ ಶೈಕ್ಷಣಿಕ ಅವಧಿಗೆಮತ್ತೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು

WhatsApp Group Join Now
Telegram Group Join Now

1. ಈ ವಿದ್ಯಾರ್ಥಿ ವೇತನವು ಕರ್ನಾಟಕದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ

2. ವಿದ್ಯಾರ್ಥಿಯ ಪೋಷಕರ ಕುಟುಂಬದ ಒಟ್ಟು ವಾರ್ಷಿಕ ಆದಾಯ ಒಂದು ಲಕ್ಷ (100000) ರೂಪಾಯಿಯ ಒಳಗೆ ಇರಬೇಕು

3. ವಿದ್ಯಾರ್ಥಿಯು ಕರ್ನಾಟಕದ ಪ್ರತಿಷ್ಟಿತ ಕಾಲೇಜಿನಲ್ಲಿ, ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಮಾನ್ಯತೆ ಪಡೆದ ಕೋರ್ಸಗಳಲ್ಲಿ ಪೂರ್ಣ ಪ್ರಮಾಣದ (Regular course) ಅವಧಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.

4. ಅರೆಕಾಲಿಕ (Correspondence) ಕೋರ್ಸ ಒದುತ್ತಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ

5. ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರೂ ಬ್ಯಾಂಕಿನಲ್ಲಿ ತಮ್ಮ ಬ್ಯಾಂಕ್ ಅಕೌಂಟ್ ಹೊಂದಿರಬೇಕು.

6. ಶೇಕಡಾವಾರು ಅಂಕಗಳಿಗೆ ಸಂಬಂದಿಸಿದಂತೆ ವಿವಿಧ ಕೋರ್ಸಗಳ ಮಾಹಿತಿಯು ಈ ಕೆಳಗಿನಂತಿದೆ.

7. ವಿದ್ಯಾರ್ಥಿಯು ಸಲ್ಲಿಸಿದ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾನ್ವಿತ ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುವುದು.ಆನ್ ಲೈನ್ ಅರ್ಜಿ ಭರ್ತಿಗೆ ಸಂಬಂದಿಸಿದ ಸೂಚನೆಗಳು ಕೆಳಗಿನಂತಿವೆ

೧. ಅರ್ಜಿ ಹಾಕಲು ಇಚ್ಚಿಸುವ ವಿದ್ಯಾರ್ಥಿಯು www.ssjanakalyantrust.org ವೆಬ್ ಸೈಟ್ ಸಂಪರ್ಕಿಸಬೇಕು.

೨. ಈ ವೆಬ್ ಸೈಟ್ ನಲ್ಲಿ ಸ್ಕಾಲರ್‌ಶಿಪ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

೩. ಆನ್ ಲೈನ್ ಅರ್ಜಿ ಭರ್ತಿಗೆ ಸಂಬಂದಿಸಿದ ಸೂಚನೆಗಳನ್ನು ಓದಬೇಕು. ನಂತರ ಅಪ್ಟ್ ನೌ ಲಿಂಕ್ ಮೇಲೆ ಕ್ಲಿಕ್ಕಿಸಬೇಕು.

೪. ಅರ್ಜಿದಾರರು ಅರ್ಜಿಯನ್ನು ತುಂಬುವ ಮೊದಲು ಶೇಕಡಾವುರು ಅಂಕಗಳಿಗೆ ಸಂಬಂದಿಸಿದಂತೆ ವಿವಿಧ ಕೋರ್ಸಗಳ ಮಾಹಿತಿಯನ್ನು ಓದಬೇಕು.

೫. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಯಾವುದೇ ಕೋರ್ ಬ್ಯಾಂಕಿಂಗ್ ಸೌಲಭ್ಯ ಇರುವ ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಮತ್ತು ಅವರು ತಮ್ಮ ಆನ್ ಲೈನ್ ಅರ್ಜಿಯಲ್ಲಿ ಈ ಖಾತೆ ಸಂಖ್ಯೆಯನ್ನು ನಮೂದಿಸಬೇಕು.ವಿದ್ಯಾರ್ಥಿಗಳು ಅವರ ಪೋಷಕರು ಅಥವಾ ಸಂಬಂಧಿಗಳ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸಬಾರದು. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲಾಗುವುದು.

ನೋಂದಾಯಿಸುವ ಕುರಿತು (SIGN UP)

ವಿದ್ಯಾರ್ಥಿಯು ಮೊದಲ ಸಲ ಲಾಗಿನ್ ಮಾಡಲು, ತಮ್ಮ ಹೆಸರು, ಇ-ಮೈಲ್ ವಿಳಾಸ, ಮೊಬೈಲ್ ಸಂಖ್ಯೆ, ಅಧಾ‌ರ್ ಸಂಖೆಯನ್ನು ನಮೂದಿಸಿ ನೊಂದಾಯಿಸಬೇಕು (SIGN UP) ಮಾಡಬೇಕು.

ಲಾಗಿನ್ ಮಾಡುವ ಕುರಿತು (SIGN IN]

ನೊಂದಾಯಿಸಿದ ನಂತರ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಮೊದಲ ಬಾರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಉಪಯೋಗಿಸಿಕೊಂಡು ವಿದ್ಯಾರ್ಥಿಯು ಲಾಗಿನ್ ಮಾಡಬೇಕು. ಲಾಗಿನ್ ಆದ ನಂತರ ಡ್ಯಾಶ್‌ಬೋರ್ಡ್ ನಲ್ಲಿರುವ ಚೇಂಜ್ ಪಾಸ್ ವರ್ಡ್ ಲಿಂಕ್ ಸಹಾಯದಿಂದ ನಿಮ್ಮ ಪಾಸ್ ವರ್ಡ್ ನ್ನು ಕಡ್ಡಾಯವಾಗಿ ಬದಲಾಯಿಸಿಕೊಳ್ಳಬೇಕು.ಪಾರ್ ಗೆಟ್ ಪಾಸ್ ವರ್ಡ್ ಸಹಾಯದಿಂದ ಮರೆತು ಹೋದ ಪಾಸ್ ವರ್ಡ್ ನ್ನು ಮತ್ತೆ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ತುಂಬಲು ಸೂಚನೆ

ಲಾಗಿನ್ ನಂತರ ಆನ್ ಲೈನ್ ಅರ್ಜಿಯಲ್ಲಿ ಐದು ವಿಭಾಗಗಳಿರುತ್ತವೆ.ಪ್ರತಿ ವಿಭಾಗದ ಕಾಲಮ್ ಗಳಲ್ಲಿ ನಿಗದಿತ ಮಾಹಿತಿಯನ್ನು ಕಡ್ಡಾಯವಾಗಿ ಭರ್ತಿಮಾಡಬೇಕು ಭರ್ತಿಮಾಡಿದ ನಂತರ ಅರ್ಜಿಯನ್ನು (PREVIOUS) ಮತ್ತು (NEXT) ಬಟನ್ ಗಳ ಸಹಾಯದಿಂದ ಪುನಹ ಪರಿಷ್ಕರಣೆಗೆ (EDIT) ಒಳ ಪಡಿಸಬಹುದು (RE CHECK) ಪರಿಷ್ಕರಣೆಯ (EDIT) ನಂತರ ಅರ್ಜಿಯನ್ನು ಸಬ್ರಿಟ್ ಮಾಡಿ ಅದರ ಮುದ್ರಿತ ಪ್ರತಿಯನ್ನು ತೆಗೆದು (PRINT OUT) ವಿದ್ಯಾರ್ಥಿಯು ತಮ್ಮ ಪಾಸ್ ಪೋರ್ಟ್ ಅಳತೆಯ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ ಅಂಟಿಸಿ ಸಹಿ ಮಾಡಬೇಕು ಮತ್ತು ತಮ್ಮ ತಂದೆ / ತಾಯಿ ಅಥವಾ ಪೋಷಕರ ಸಹಿ ಮತ್ತು ತಾವು ವಿಭ್ಯಾಭ್ಯಾಸ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರ / ನಿರ್ದೇಶಕರ / ಇಲಾಖಾ ಮುಖ್ಯಸ್ಥರ ಸೀಲ್ ಮತ್ತು ಸಹಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.ಮುದ್ರಿತ ಪ್ರತಿಯನ್ನು (PRINT OUT) ಫೋಟೊ ಮತ್ತು ಸಹಿ ತೆಗೆದುಕೊಂಡ ನಂತರ ಅದರ ಸ್ಕ್ಯಾನ್ ಕಾಪಿಯನ್ನು ಇತರೆ ದಾಖಲಾತಿಗಳೊಂದಿಗೆ ನಿಮಗೆ ನೀಡಿರುವ ಲಾಗಿನ್ ನಲ್ಲಿ ಅಪ್ ಲೋಡ್ ಮಾಡಬೇಕು.ಎಲ್ಲಾ ಪೈಲ್ ಗಳನ್ನು (attachments) ಅಪ್ ಲೋಡ್ ಮಾಡಿದ ನಂತರ ಅರ್ಜಿಯು ಸ್ವಯಂ ಆಗಿ ಪೈನಲ್ ಸಬ್ರಿಟ್ ಆಗುತ್ತದೆ. ಪೈನಲ್ ಸಬ್ರಿಟ್ ನಂತರ ಪುನಹ ಪರಿಷ್ಕರಣೆಗೆ (EDIT) ಅವಕಾಶವಿರುವುದಿಲ್ಲ.

ಅಗತ್ಯವಾಗಿ ಅಪ್ಲೋಡ್ ಮಾಡಬೇಕಾದ ದಾಖಲಾತಿಗಳು

ಅರ್ಜಿದಾರರು ಮುದ್ರಿತ ಅರ್ಜಿಯನ್ನು ಈ ಕೆಳಕಂಡ ದಾಖಲೆಗಳೊಂದಿಗೆ ಅಪ್ ಲೋಡ್ಮಾಡಬೇಕು

೧. ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಮುದ್ರಿಸಿದ ಪ್ರತಿಯ ಸಹಿ ಮಾಡಿಸಿ ಸ್ಕ್ಯಾನ್ ಮಾಡಿದ ಪ್ರತಿ.

೨. ವಿದ್ಯಾರ್ಥಿಯ ಅಧಾರ ಕಾರ್ಡ್ ಪ್ರತಿ.

೩. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯದ ಪ್ರತಿ. (Income Certificate)

೪. ವಿದ್ಯಾರ್ಥಿಯ ಎಸ್. ಎಸ್. ಎಲ್. ಸಿ / ೧೦ನೇ ತರಗತಿಯ,

೫. ಎರಡನೆಯ ಪಿಯುಸಿ/12ರ ಅಂಕ ಪಟ್ಟಿಯ ನಕಲು ಪ್ರತಿ.

೬. ವಿದ್ಯಾ ಸಂಸ್ಥೆ ಅಥವಾ ಕಾಲೇಜಿನಲ್ಲಿ ದಾಖಲಾತಿ ಅಥವಾ ಪ್ರವೇಶ ಪಡೆದು ಹಣ ಕಟ್ಟಿದ ರಸೀದಿಯ ನಕಲು ಪ್ರತಿ.

೭. ವಿದ್ಯಾರ್ಥಿಯ ಫೋಟೋ ಇರುವ, ಬ್ಯಾಂಕ ಖಾತೆ ಸಂಖ್ಯೆ ಮತ್ತು IFSC ಕೋಡ್ ತೋರಿಸುವ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ.

▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:31-07-2024

ಗಮನಿಸಿ:

ಆನ್ ಲೈನ್ ಅಪ್ಲಿಕೇಶನ್ ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ನಮ್ಮ ಇ-ಮೈಲ್ ವಿಳಾಸ drssjkt@gmail.com ಮೂಲಕ ಉತ್ತರಿಸಲಾಗುವುದು.

CLICK HERE TO APPLICATION

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!