ಸಚಿವ ಸಂಪುಟ-ಕಡತ: ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಸರ್ಕಾರಿ ಇಲಾಖೆಗಳಲ್ಲಿನ ಯಾವೆಲ್ಲ ಪ್ರಕರಣಗಳನ್ನು ಮಂಡಿಸಲಾಗುತ್ತದೆ ಎಂಬುದನ್ನು ತಿಳಿಯೋಣ.

ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಸರ್ಕಾರಿ ಇಲಾಖೆಗಳಲ್ಲಿನ ಯಾವೆಲ್ಲ ಪ್ರಕರಣಗಳನ್ನು ಮಂಡಿಸಲಾಗುತ್ತದೆ ಎಂಬುದನ್ನು ತಿಳಿಯೋಣ.

1.ಸರ್ಕಾರಿ ಇಲಾಖೆಗಳಲ್ಲಿ ಪ್ರಕರಣಗಳನ್ನು ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಮಂಡಿಸುವ ಬಗ್ಗೆ ಯಾವುದಾದರು ನಿಯಮವಿದೆಯೇ?

WhatsApp Group Join Now
Telegram Group Join Now

ಹೌದು, ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮಗಳಲ್ಲಿ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಿಕೊಡಲಾಗಿದೆ. ಇದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕರಿಗಾಗಿ ಪ್ರಕಟಿಸಲಾಗಿದೆ.

2.ಮಂತ್ರಿ ಮಂಡಲ ಎಂದರೇ :-

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ 2(1)(ಬಿ) ರನ್ವಯ ಮಂತ್ರಿ ಮಂಡಲ ಎಂದರೆ ಭಾರತ ಸಂವಿಧಾನದ ಅನುಚ್ಛೇದ 163 ರನ್ವಯ ರಚಿತವಾದ ಮಂತ್ರಿ ಮಂಡಲವಾಗಿದೆ.

3.ಸಚಿವ ಸಂಪುಟ ಎಂದರೇ :-

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ 12 ರನ್ವಯ ಸಚಿವ ಸಂಪುಟದ ಸಭೆಯಲ್ಲಿ ಸಂಪುಟ ಎಂದು ಕರೆಯಲಾಗುವ ಮಂತ್ರಿ ಮಂಡಲದ ಒಂದು ಸಮಿತಿ ಆಗಿದೆ. ಸಚಿವ ಸಂಪುಟ ದರ್ಜೆಯ ಸಚಿವರುಗಳನ್ನು ಒಳಗೊಂಡಿರತಕ್ಕದ್ದಾಗಿದೆ. ಯಾವುದೇ ಸಂದರ್ಭದಲ್ಲಿ ಮಂತ್ರಿ ಮಂಡಲದ ಸಭೆ ಸೇರಿದಾಗ ಬಿಟ್ಟು, ಮೊದಲನೇ ಅನುಸೂಚಿಯಲ್ಲಿ ತಿಳಿಸಿರುವ ಎಲ್ಲಾ ವಿಷಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಸಾಮಾನ್ಯವಾಗಿ ಪರಿಗಣಿಸತಕ್ಕದ್ದಾಗಿದೆ. ಸಚಿವ ಸಂಪುಟ ದರ್ಜೆಯ ಸಚಿವರುಗಳನ್ನು ಹೊರತು ಪಡಿಸಿ, ಮುಖ್ಯ ಮಂತ್ರಿಗಳ ಸೂಚನೆ ಮೇರೆಗೆ ಅಥವಾ ರಾಜ್ಯ ಸಚಿವರಿಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಿದಾಗ ರಾಜ್ಯ ಸಚಿವರು/ಉಪ ಸಚಿವರು ಸಭೆಯಲ್ಲಿ ಭಾಗವಹಿಸಬಹುದು.

4.ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರಲ್ಲಿ ಎಷ್ಟು ಅನುಸೂಚಿಗಳಿವೆ? ಅವುಗಳ ಏನನ್ನು ಸೂಚಿಸುತ್ತವೆ?

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರಲ್ಲಿ ಒಟ್ಟು 03 ಅನುಸೂಚಿಗಳಿವೆ. ಈ ಅನುಸೂಚಿಗಳಲ್ಲಿ ರಾಜ್ಯಪಾಲರಿಗೆ, ಮುಖ್ಯ ಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಮಂಡಿಸಲಾಗುವ ಪ್ರಕರಣಗಳ ಬಗ್ಗೆ ತಿಳಿಸಿಕೊಡಲಾಗಿದೆ.

➡ ಮೊದಲನೇ ಅನುಸೂಚಿಯಲ್ಲಿನ ಪ್ರಕರಣಗಳನ್ನು ಸಚಿವ ಸಂಪುಟಕ್ಕೆ ಮಂಡಿಸಲಾಗುವುದು.

➡ ಎರಡನೇ ಅನುಸೂಚಿಯಲ್ಲಿನ ಪ್ರಕರಣಗಳನ್ನು ಮುಖ್ಯ ಮಂತ್ರಿಯವರಿಗೆ ಮಂಡಿಸಲಾಗುವುದು.

➡ ಮೂರನೇ ಅನುಸೂಚಿಯಲ್ಲಿನ ಪ್ರಕರಣಗಳನ್ನು ರಾಜ್ಯಪಾಲರಿಗೆ ಮಂಡಿಸಲಾಗುವುದು.

5.ಸಚಿವ ಸಂಪುಟದ ಕಾರ್ಯವಿಧಾನ ಹೇಗಿರುತ್ತದೆ :-

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ 20 & 21 ರಲ್ಲಿ ತಿಳಿಸಿಕೊಡಲಾಗಿದೆ. ಮೊದಲನೇ ಅನುಸೂಚಿಯಲ್ಲಿ ಸಚಿವ ಸಂಪುಟದ ಮುಂದೆ ಈ ನಿಯಮಗಳ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಪ್ರಕರಣಗಳನ್ನು ಇಲಾಖೆಯ ಪ್ರಭಾರದಲ್ಲಿರುವ ಸಚಿವರಿಗೆ ಸಲ್ಲಿಸಿದ ನಂತರ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು. ಹಾಗೂ ಮೊದಲನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದವುಗಳನ್ನು ಹೊರತು ಪಡಿಸಿ ಇತರ ಪ್ರಕರಣಗಳನ್ನು ಮುಖ್ಯ ಮಂತ್ರಿಯವರ ಅಥವಾ ಮುಖ್ಯ ಮಂತ್ರಿಯವರ ಸಮ್ಮತಿಯೊಂದಿಗೆ ಇಲಾಖೆಯ ಪ್ರಭಾರ ದಲ್ಲಿರುವ ಸಚಿವರ ನಿರ್ದೇಶನದ ಮೇರೆಗೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು:

ಆದರೆ, ಯಾವ ಪ್ರಕರಣದ ಬಗ್ಗೆ ರಾಜ್ಯ ಹಣಕಾಸಿಗೆ ಪ್ರತಿಕೂಲ ಷರಾ ಉಂಟುಮಾಡುವ ಪ್ರಕರಣಗಳ ಕುರಿತು ಇಲಾಖೆಯೊಂದಿಗೆ ಸಮಾಲೋಚಿಸಬೇಕಾಗಿದೆಯೋ ಆ ಯಾವುದೇ ಪ್ರಕರಣವನ್ನು, ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ ಅಸಾಧಾರಣ ಸನ್ನಿವೇಶಗಳನ್ನುಳಿದು, ಅದನ್ನು ಪರಿಗಣಿಸುವ ಅವಕಾಶ ಹಣಕಾಸು ಸಚಿವರಿಗೆ ಇದ್ದ ಹೊರತು, ಸಚಿವ ಸಂಪುಟವು ಚರ್ಚಿಸತಕ್ಕದ್ದಲ್ಲ.

ರಾಜ್ಯಪಾಲರು ಸಂವಿಧಾನದ 167 (ಸಿ) ಅನುಚ್ಛೇದದ ಮೇರೆಗೆ ಮಂತ್ರಿ ಮಂಡಲದ ಪರಿಗಣನೆಗಾಗಿ ಸಲ್ಲಿಸಲು ಅಗತ್ಯಪಡಿಸಬಹುದಾದ ಯಾವುದೇ ಪ್ರಕರಣವನ್ನು ಮುಖ್ಯ ಮಂತ್ರಿಯವರ ನಿರ್ದೇಶನದ ಮೇರೆಗೆ ಮಂತ್ರಿಮಂಡಲದ ಮುಂದೆ ಮಂಡಿಸತಕ್ಕದ್ದು. ಈ ನಿಯಮಗಳ ಉಪಬಂಧಗಳನ್ನು ಯಥೋಚಿತ ವ್ಯತ್ಯಾಸಗಳೊಂದಿಗೆ ಮಂತ್ರಿಮಂಡಲದ ಕಾರ್ಯವಿಧಾನದ ಸಂಬಂಧದಲ್ಲಿ ಅನ್ವಯಿಸತಕ್ಕದ್ದು.

ಮುಂದುವರೆದು, 50 ಕೋಟಿ ಮತ್ತು ಅದಕ್ಕೂ ಹೆಚ್ಚು ಹಣವನ್ನು ಒಳಗೊಂಡ ಬಾಹ್ಯ ನೆರವಿನ ಯೋಜನೆಗೆ ಸಂಬಂಧಿಸಿದ ಪ್ರಸ್ತಾವವನ್ನು ಸಚಿವ ಸಂಪುಟವು ಈಗಾಗಲೇ ಅನುಮೋದಿಸಿರುವಲ್ಲಿ, ಅಂತಹ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದಲ್ಲ. ಆದರೆ, ಸಚಿವ ಸಂಪುಟದ ಪೂರ್ವಾನುಮೋದನೆಯೊಂದಿಗೆ ಯಾವುದೇ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ರಚಿಸಲಾದಂಥ, ಅಂಥ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ವ್ಯಕ್ತಿಗಳನ್ನು ಒಳಗೊಂಡಿರುವ ಮತ್ತು ಅಂಥ ಅಧಿಕಾರಗಳನ್ನು ಮತ್ತು ಪ್ರಕಾರ್ಯಗಳನ್ನು ಹೊಂದಿರುವಂಥ ಅಧಿಕಾರಯುತ ಸಮಿತಿಯ ಮುಂದೆ ಮಂಡಿಸತಕ್ಕದ್ದು.

6.ರಾಜ್ಯಪಾಲರಿಗೆ ಸಲ್ಲಿಸಬೇಕಾದ ಪ್ರಕರಣಗಳು ಯಾವುವು?

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ ಮೂರನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದೆ.

ಮೂರನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದ ರಾಜ್ಯಪಾಲರಿಗೆ ಸಲ್ಲಿಸಬೇಕಾದ ಪ್ರಕರಣಗಳು:-

1) ಸಂವಿಧಾನ ಅನುಚ್ಚೇದ 161 ರ ಅನುಸಾರ ಕ್ಷಮದಾನದ ಅರ್ಜಿಗಳು. ದಂಡನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ/ಮುಂದೂಡುವ/ಮಾಫಿ ಮಾಡುವ ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡುವ/ಮಾಫಿ ಮಾಡುವ ಅಥವಾ ಕಡಿಮೆ ಮಾಡುವ ಅರ್ಜಿಗಳು.

2) ರಾಜ್ಯದ ಶಾಂತಿ ಮತ್ತು ನೆಮ್ಮದಿಗೆ ಭಂಗತರಬಹುದಾದ ಪ್ರಕರಣಗಳು.

3) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ಬಾಧಕ ಉಂಟು ಮಾಡಬಹುದಾದ ಪ್ರಕರಣಗಳು

4) ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರ/ಯಾವುದೇ ಇತರೆ ರಾಜ್ಯ ಸರ್ಕಾರ/ಸರ್ವೋಚ್ಛ ನ್ಯಾಯಾಲಯ/ಉಚ್ಚ ನ್ಯಾಯಾಲಯಗಳೊಂದಿಗೆ ನಡುವಿನ ಸಂಬಂಧಗಳಿಗೆ ತೊಂದರೆಯುಂಟು ಮಾಡುವ ಪ್ರಕರಣಗಳು.

5) ರಾಜ್ಯಪಾಲರ ಆಪ್ತ ಸಿಬ್ಬಂದಿ ಮತ್ತು ರಾಜಭವನದ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳು.

6) ಲೋಕಸೇವಾ ಆಯೋಗದ ಅಧ್ಯಕ್ಷರು/ಸದ್ಯರು/ಕಾರ್ಯದರ್ಶಿಗಳ ಹಾಗೂ ನೇಮಕ/ರಾಜೀನಾಮೆ ಅಂಗೀಕಾರ/ಸೇವೆಯಿಂದ ತೆಗೆದುಹಾಕುವ ಪ್ರಸ್ತಾವನೆಗಳು. ಲೋಕಾಯುಕ್ತ/ಉಪಲೋಕಾಯುಕ್ತರ

7) ಅಡ್ವಕೇಟ್ ಜನರಲ್ ರ ನೇಮಕಕ್ಕೆ ಮತ್ತು ರಾಜೀನಾಮೆಯ ಅಂಗೀಕಾರಕ್ಕೆ ಹಾಗೂ ಅವರಿಗೆ ಸಂದಾಯ ಮಾಡಬೇಕಾದ ಸಂಭಾವನೆಯನ್ನು ನಿರ್ಧರಿಸುವುದಕ್ಕೆ ಅಥವಾ ವ್ಯತ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು.

8) ಕಾರ್ಯದರ್ಶಿಗಳು, ಅಪರ ಕಾರ್ಯದರ್ಶಿಗಳು, ವಿಶೇಷ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಅದೇ ಸ್ಥಾನಮಾನದ ವಿಶೇಷ ಅಧಿಕಾರಿಗಳು/ಇಲಾಖಾ ಮುಖ್ಯಸ್ಥರು ಮತ್ತು ಅದೇ ಸ್ಥಾನಮಾನದ ಹೊಂದಿರುವ ವಿಶೇಷ ಅಧಿಕಾರಿಗಳು/ಅಪರ ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಜಿಲ್ಲಾ ನ್ಯಾಯಾಧೀಶಕರು/ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್/ಜಿಲ್ಲಾಧಿಕಾರಿಗಳ ನ್ನು ಕೆಳದರ್ಜೆಗೆ ಇಳಿಸುವುದಕ್ಕೆ, ಕಡ್ಡಾಯ ನಿವೃತ್ತಿಗೊಳಿಸುವುದಕ್ಕೆ ಸೇವೆಯಿಂದ ತೆಗೆದು ಹಾಕುವುದಕ್ಕೆ ಅಥವಾ ವಜಾ ಮಾಡುವುದಕ್ಕೆ ಸಂಬಂಧಪಟ್ಟ ಪ್ರಸ್ತಾವನೆಗಳು.

9) ವಿಧಾನ ಮಂಡಲದ ಸಭೆಗಳನ್ನು ಕರೆಯುವುದು ಮತ್ತು ಮುಂದೂಡುವುದು, ವಿಧಾನ ಮಂಡಲದ ವಿಸರ್ಜನೆ, ವಿಧಾನ ಸಭೆಯ ವಿಸರ್ಜನೆ, ರಾಜ್ಯ ವಿಧಾನ ಸಭೆಗೆ ಮತ್ತು ಪರಿಷತ್ತಿಗೆ ನಾಮನಿರ್ದೇಶನ, ವಿಧಾನ ಮಂಡಲದ ಚುನಾವಣೆಗೆ ದಿನಾಂಕಗಳನ್ನು ಗೊತ್ತುಪಡಿಸುವುದಕ್ಕೆ ಮತ್ತು ಇವುಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳು.

10) ಸಂವಿಧಾನದ ಮೇರೆಗೆ ಅಥವಾ ಕಾನೂನಿನ ಯಾವುದೇ ಉಪಬಂಧದ ಮೇರೆಗೆ ರಾಜ್ಯಪಾಲರು ಅಧಿಅಖರಿಗಳನ್ನು ಚಲಾಯಿಸಬಹುದಾದಂಥ ಪ್ರಕರಣಗಳು.

11) ಮುಖ್ಯ ಮಂತ್ರಿಯವರು ಅಗತ್ಯವೆಂದು ಭಾವಿಸುವಂಥ ಆಡಳಿತಾತ್ಮಕ ಪ್ರಾಮುಖ್ಯತೆಯ ಇತರ ಪ್ರಕರಣಗಳು.

12) ಮುಖ್ಯಮಂತ್ರಿಯವರ ಮತ್ತು ರಾಜ್ಯದ ಇತರ ಮಂತ್ರಿಗಳ ನೇಮಕ ಮತ್ತು ಅವರ ರಾಜೀನಾಮೆಯ ಅಂಗೀಕಾರದ ಪ್ರಸ್ತಾವನೆಗಳು

13) ರಾಜ್ಯ ವಿಧಾನ ಮಂಡಲದ ಸದನವನ್ನು ಅಥವಾ ಸದನಗಳನ್ನುದ್ದೇಶಿಸಿ ಮಾಡುವ ರಾಜ್ಯಪಾಲರ ಭಾಷಣ ಮತ್ತು ಅವರ ಸಂದೇಶ.

14) ರಾಜ್ಯ ವಿಧಾನ ಮಂಡಲದ ಸದನಗಳ ಸದಸ್ಯರ ಅನರ್ಹತೆಗೆ ಸಂಬಂದಪಟ್ಟ ಪ್ರಕರಣಗಳು

15) ರಾಜ್ಯ ವಿಧಾನ ಮಂಡಲದ ಉಭಯ ಸದನಗಳಿಂದ ಅಂಗೀಕಾರವಾದ ವಿಧೇಯಕಗಳು

16) ಪೂರಕ, ಹೆಚ್ಚುವರಿ ಅಥವಾ ಅಧಿಕ ಅನುದಾನ ಮತ್ತು ಧನವಿನಿಯೋಗ ವಿಧೇಯಕಗಳಿಗೆ ಸಂಬಂಧಿಸಿದ ವಾರ್ಷಿಕ ಹಣಕಾಸು ತಃಖೆಗಳನ್ನು ರಾಜ್ಯ ವಿಧಾನ ಮಂಡಳದ ಸದನ ಅಥವಾ ಸದನಗಳ ಮುಂದೆ ಮಂಡಿಸುವುದಕ್ಕಾಗಿ ರಾಜ್ಯಪಾಲರರ ಶಿಫಾರಸ್ಸುಗಳಿಗೆ ಸಂಬಂದಪಟ್ಟ ಪ್ರಕರಣಗಳು.

17) ಅಧ್ಯಾದೇಶಗಳ ಉದ್ಯೋಷಣೆಗೆ ಮತ್ತು ನಿರಸಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು.

7.ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಪ್ರಕರಣಗಳು ಯಾವುವು?

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ ಎರಡನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದೆ.

ಎರಡನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಪ್ರಕರಣಗಳು:-

1.ದಯಾ ಅರ್ಜಿಗಳು ಮತ್ತು ಸಂವಿಧಾನ ಅನುಚ್ಛೇದ 161 ರ ಅನುಸಾರ ಕ್ಷಮದಾನದ ಅರ್ಜಿಗಳು, ದಂಡನೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ/ಮುಂದೂಡುವ/ಮಾಫಿ ಮಾಡುವ ಅಥವಾ ಶಿಕ್ಷೆಯನ್ನು ಅಮಾನತ್ತಿನಲ್ಲಿಡುವ/ಮಾಫಿ ಮಾಡುವ ಅಥವಾ ಕಡಿಮೆ ಮಾಡುವ ಅರ್ಜಿಗಳು.

2.ನೀತಿಯ ಪ್ರಶ್ನೆಗಳನ್ನು ಎತ್ತುವ ಪ್ರಕರಣಗಳು ಮತ್ತು 21ನೇ ನಿಯಮದ ವ್ಯಾಪ್ತಿಗೆ ಬಾರದ ಆಡಳಿತಾತ್ಮಕ ಪ್ರಾಮುಖ್ಯತೆಯುಳ್ಳ ಎಲ್ಲ ಪ್ರಕರಣಗಳು.

3.ರಾಜ್ಯದ ಶಾಂತಿ ಮತ್ತು ನೆಮ್ಮದಿಗೆ ಭಂಗತರಬಹುದಾದ ಪ್ರಕರಣಗಳು ಮತ್ತು ಕೋಮುವಿವಾದಗಳಿಗೆ ಮತ್ತು ವ್ಯವಸ್ಥೆಯನ್ನು ಬುಡಮೇಲು ಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿದ ವರದಿಗಳೂ ಸೇರಿದಂತೆ ರಾಜಕೀಯ ಪರಿಸ್ಥಿತಿಗಳಿಗೆ ಮತ್ತು ಕಾನೂನು ಹಾಗೂ ಸುವ್ಯವಸ್ಥೆಗೆ ಸಂಬಂಧಿಸಿದ ನಿಯಕಾಲಿಕ ಮತ್ತು ವಿಶೇಷ ವರದಿಗಳು.

4.ಯಾವುದೇ ಅಲ್ಪಸಂಖ್ಯಾತ ಸಮುದಾಯದ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ಬಾಧಕ ಉಂಟು ಮಾಡಬಹುದಾದ ಪ್ರಕರಣಗಳು

5.ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರ/ಯಾವುದೇ ಇತರೆ ರಾಜ್ಯ ಸರ್ಕಾರ/ಸರ್ವೋಚ್ಚ ನ್ಯಾಯಾಲಯ/ಉಚ್ಚ ನ್ಯಾಯಾಲಯಗಳೊಂದಿಗೆ ನಡುವಿನ ಸಂಬಂಧಗಳಿಗೆ ತೊಂದರೆಯುಂಟು ಮಾಡುವ ಪ್ರಕರಣಗಳು.

6.ಸಂವಿಧಾನ ಅನುಚ್ಚೇಯ 22(4)(ಎ)ರ ಮೇರೆಗೆ ಅಧಿವಿಚಾರಣೆ ಮಾಡದೆಯೇ ವ್ಯಕ್ತಿಗಳ ಸ್ಥಾನಬದ್ಧತೆ ಕುರಿತು ಸಲಹಾ ಮಂಡಲಿಯ ರಚನೆ.

7.ಕರ್ನಾಟಕ ಆಡಳಿತ ಸೇವೆ (ಗುಂಪು-ಎ) ಹಿರಿಯ ಶ್ರೇಣಿ ಮತ್ತು ಮೇಲ್ಪಟ್ಟ ವೇತನ ಶ್ರೇಣಿಯುಳ್ಳ ಅಧಿಕಾರಿಯ ದರ್ಜೆಗೆ ಸಮನಾದ ದರ್ಜೆಯ ರಾಜ್ಯ ಸಿವಿಲ್ ಸೇವೆಯ ಅಧಿಕಾರಿಯ ವಿರುದ್ದ ಶಿಸ್ತು ಕ್ರಮ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ಯಾವುದೇ ದೂರು ಅಥವಾ ಶಿಸ್ತು ವಿಷಯವನ್ನು ಲೋಕಾಯುಕ್ತರಿಗೆ ಅಥವಾ ಉಪಲೋಕಾಯುಕ್ತರಿಗೆ ಉಲ್ಲೇಖಿಸುವ ಪ್ರಸ್ತಾವನೆಗಳು ಅಥವಾ ಲೋಕಾಯುಕ್ತರು ಮತ್ತು ಉಪಲೋಕಾಯುಕ್ತರ ಮಾಡಿರುವ ಶಿಫಾರಸ್ಸಿನ ಮೇಲೆ ಕೈಗೊಳ್ಳಬೇಕಾದ ಕ್ರಮಕ್ಕೆ ಸಂಬಂಧಪಟ್ಟ ಪ್ರಸ್ತಾವನೆಗಳು.

8.ಸರ್ಕಾರದ ಕಾರ್ಯದರ್ಶಿಗಳು/ವಿಶೇಷ ಕಾರ್ಯದರ್ಶಿಗಳು/ಅಪರ ಕಾರ್ಯದರ್ಶಿಗಳು/ಜಂಟಿ ಕಾರ್ಯದರ್ಶಿಗಳು/ಉಪಕಾರ್ಯದರ್ಶಿಗಳು/ಇಲಾಖಾ ಮುಖ್ಯಸ್ಥರುಗಳು/ಜಂಟಿ ಕಾರ್ಯದರ್ಶಿಗಳ ಸ್ಥಾನಮಾನಕ್ಕಿಂತ ಕಡಿಮೆಯಲ್ಲದ ಸ್ಥಾನಮಾನದ ವಿಶೇಷ ಅಧಿಕಾರಿಗಳು/ಅಪರ ಜಿಲ್ಲಾ ನ್ಯಾಯಾಧೀಶಕರು ಒಳಗೊಂಡಂತೆ ಜಿಲ್ಲಾ ನ್ಯಾಯಾಧೀಶರುಗಳು/ಡಿಜಿ ಮತ್ತು ಐಜಿಪಿ/ಎಡಿಜಿಪಿ/ಐಜಿಪಿ/ಡಿಐಜಿಪಿ/ಜಿಲ್ಲಾಧಿಕಾರಿಗಳು/ಪೊಲೀಸ್ ಅಧೀಕ್ಷಕರು/ಅಧೀಕ್ಷಕ ಇಂಜಿನಿಯರುಗಳು ಮತ್ತು ಕಾರ್ಯನಿರ್ವಾಹಕ ಇಂಜಿನಿಯರಗಳು/ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು.. ಈ ಎಲ್ಲಾ ಅಧಿಕಾರಿಗಳ ನೇಮಕ ಮತ್ತು ಸ್ಥಳನಿಯುಕ್ತಿಯ ಪ್ರಸ್ತಾವನೆಗಳು.

9.ಪೊಲೀಸ್ ದಳದ ಸಂಖ್ಯಾಬಲದಲ್ಲಿ ಮತ್ತು ಹಂಚಿಕೆಯಲ್ಲಿ ಯಾವುದೇ ಮುಖ್ಯ ಬದಲಾವಣೆಗಳನ್ನೊಳಗೊಂಡಿರುವ ಪ್ರಸ್ತಾವನೆಗಳು.

10.ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವುದಕ್ಕೆ ಅಥವಾ ತಿದ್ದುಪಡಿ ಮಾಡುವುದಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗವು ಮಾಡಿರುವ ಶಿಫಾರಸ್ಸುಗಳಿಗೆ ಅಸಂಗತವಾಗಿರುವ ಪ್ರಸ್ತಾವನೆಗಳು.

11.ಅಖಿಲ ಭಾರತ ಸೇವೆಯ ಅಧಿಕಾರಿಗಳ ನೇಮಕಾತಿ ಅಥವಾ ಸೇವಾ ಷರತ್ತುಗಳಲ್ಲಿ ಮುಖ್ಯ ಬದಲಾವಣೆಗಳನ್ನು ಒಳಗೊಂಡಿರುವ ಪ್ರಸ್ತಾವಗಳು.

12.ಮುಖ್ಯ ಮಂತ್ರಿಯವರಿಗೆ ವೈಯಕ್ತಿಕವಾಗಿ ಬರೆಯಲಾದ ಮನವಿಪತ್ರಗಳು, ಅವುಗಳ ಆ ಉದ್ದೇಶಕ್ಕಾಗಿ ಮಾಡಿದ ನಿಯಮಗಳ ಅಡಿಯಲ್ಲಿ ತಡೆಹಿಡಿದಿದ್ದ ಹೊರತು.

13.ಗೆಜೆಟೆಡ್ ಹುದ್ದೆಗಳಿಗೆ ಅನ್ವಯವಾಗುವ ಕನಿಷ್ಠ ಕಾಲಿಕ ವೇತನ ಶ್ರೇಣಿಯು 2 [ಕರ್ನಾಟಕ ಆಡಳಿತ ಸೇವೆ (ಗುಂಪು-ಎ) ಹಿರಿಯ ಶ್ರೇಣಿಯ ಕನಿಷ್ಠಕ್ಕಿಂತ ಕಡಿಮೆಯ್ದಿದ] ಎಲ್ಲ ಗೆಜೆಟೆಡ್ ಹುದ್ದೆಗಳಿಗೆ ಮತ್ತು ಅಡ್ವಕೇಟ್ ಜನರಲ್./ಅಪೀಲು ನ್ಯಾಯಾಧಿಕರಣದ ಅಧ್ಯಕ್ಷರು ಮತ್ತು ಸದಸ್ಯರು/ ಲೋಕಸೇವಾ ಆಯೋಗದ ಕಾರ್ಯದರ್ಶಿ ಈ ಮುಂದಿನ ಹುದ್ದೆಗಳ ಸೃಜನೆ ಮತ್ತು ಅವುಗಳಿಗೆ ಮೊದಲ ನೇಮಕಗಳು:

14.ಸರ್ಕಾರದ ಒಡೆತನಕ್ಕೆ ಒಳಪಟ್ಟಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ಸರ್ಕಾರವು ಪ್ರಮುಖ ಹಣಕಾಸು ಹಿತಾಸಕ್ತಿಯನ್ನು ಹೊಂದಿರುವ ಶಾಸನಬದ್ಧ / ಶಾಸನಬದ್ಧವಲ್ಲದ ಸಂಸ್ಥೆ, ಕಂಪನಿ. ನಿಗಮ ಮುಂತಾದವುಗಳಲ್ಲಿ ಯಾವುದೇ ಹುದ್ದೆಯ ಸೃಜನೆ ಮತ್ತು ಅದಕ್ಕೆ ಮೊದಲ ನೇಮಕಕ್ಕೆ ಸರ್ಕಾರದ ಅನುಮೋದನೆಯ ಅಗತ್ಯವಿದ್ದರೆ ಅಂಥ ಯಾವುದೇ ಹುದ್ದೆಯ ಸೃಜನೆ ಮತ್ತು ಅದಕ್ಕೆ ಮೊದಲ ನೇಮಕ.

15.ಲೋಕಸೇವಾ ಆಯೋಗದ ವ್ಯಾಪ್ತಿಯ ಅಡಿಯಲ್ಲಿ ಬರದ ಎಲ್ಲ ಗೆಜೆಟೆಡ್ ಹುದ್ದೆಗಳಿಗೆ ಮೊದಲ ನೇಮಕ.

16.ಸರ್ಕಾರದ ನಿಯಮಗಳ ಅಥವಾ ಆದೇಶಗಳ ಮೇರೆಗೆ ನಿವೃತ್ತಿ ಹೊಂದಬೇಕಾಗಿರುವ ದಿನಾಂಕದ ನಂತರ

17.ಒಬ್ಬ ಗೆಜೆಟೆಡ್ ಅಧಿಕಾರಿಗೆ ರಜೆ ಮಂಜೂರು ಮಾಡುವುದಕ್ಕೆ ಅಥವಾ ಸೇವೆಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳು.

18.ಯಾವುದೇ ಸಮಿತಿಯ ಅಧಿಕಾರೇತರ ವ್ಯಕ್ತಿಯ ಅಥವಾ ಯಾವುದೇ ಇತರ ಸಾಮರ್ಥ್ಯದಲ್ಲಿ ಯಾರೇ ವ್ಯಕ್ತಿಯ ನೇಮಕಕ್ಕೆ ಸಂಬಂಧಿಸಿದ ಎಲ್ಲ ಪ್ರಸ್ತಾವಗಳು.

19.ಪರಿವೀಕ್ಷಣೆ (ಪ್ರೊಬೇಷನ್) ಅಥವಾ ಸ್ಥಾನಪನ್ನದ (ಅಫಿಸಿಯೋಷನ್) ಸಾಮಾನ್ಯ ಅವಧಿಯನ್ನು ಮನ್ನಾ ಮಾಡಲು ಅಥವಾ ಕಡಿಮೆ ಮಾಡಲು ಪ್ರಸ್ತಾವಿಸುವ ಎಲ್ಲ ಪ್ರಕರಣಗಳು.

20.ಐದು ಕೋಟಿ ರೂ.ಗಳು ಅಥವಾ ಮೇಲ್ಪಟ್ಟು. ಆದರೆ ಯಾವುದೇ ಒಂದು ಪ್ರಕರಣದಲ್ಲಿ ಹತ್ತು ಕೋಟಿ ರೂ.ಗಳಿಗೆ ಮೀರದ ಹಣಕ್ಕೆ

ಸರ್ಕಾರದ ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.

21.ಸರ್ಕಾರಿ ವಿಮಾನಗಳ ಖರೀದಿ ಮತ್ತು ಅದರ ನಿರ್ವಹಣೆಯನ್ನು ಒಳಗೊಂಡಂತ ನಾಗರಿಕ ವಿಮಾನ ಯಾನ.

22.ಈ ನಿಯಮಗಳಿಗೆ ಮತ್ತು ಕರ್ನಾಟಕ ರಾಜ್ಯ (ಕಾರ್ಯಕಲಾಪಗಳ ಹಂಚಿಕೆ) ನಿಯಮಗಳು, 1977ಕ್ಕೆ ತಿದ್ದುಪಡಿಗಳು; ಮತ್ತು ಇದರಲ್ಲಿ ನಿರ್ದಿಷ್ಟಪಡಿಸಿದ, ಆದರೆ ಮುಖ್ಯಮಂತ್ರಿಯವರು ಸಲ್ಲಿಸುವಂತೆ ಅಗತ್ಯಪಡಿಸುವ ಅಥವಾ ಆ ಸಂದರ್ಭದ ಸನ್ನಿವೇಶಗಳು ವಿಶೇಷ ಪ್ರಾಮುಖ್ಯತೆಯನ್ನು ನೀಡಬಹುದಾದಂಥ ಅಥವಾ ಮುಖ್ಯಮಂತ್ರಿಯವರು ವಿಶೇಷವಾಗಿ ಆಸಕ್ತಿ ಹೊಂದಿರಬಹುದಾದಂಥ ಯಾವುದೇ ಪ್ರಕರಣ ಅಥವಾ ಪ್ರಕರಣಗಳ ವರ್ಗ

8.ಸಚಿವ ಸಂಪುಟಕ್ಕೆ ಸಲ್ಲಿಸಬೇಕಾದ ಪ್ರಕರಣಗಳು ಯಾವುವು?

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977 ರ ನಿಯಮ ಮೂರನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದೆ.

ಮೂರನೇ ಅನುಸೂಚಿಯಲ್ಲಿ ತಿಳಿಸಿಕೊಡಲಾಗಿದ ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಪ್ರಕರಣಗಳು:-

1.ಅಧ್ಯಾದೇಶಗಳೂ ಒಳಗೊಂಡಂತೆ ಶಾಸನಗಳ ಪ್ರಸ್ತಾವಗಳು, ಆದರೆ ಪೂರ್ಣವಾಗಿ ಔಪಚಾರಿಕ ಸ್ವರೂಪದ ಅಥವಾ ಅತಿ ಕಡಿಮೆ ಪ್ರಾಮುಖ್ಯತೆ ಹೊಂದಿರುವ ವಿಷಯಗಳೆಂದು ಮುಖ್ಯ ಮಂತ್ರಿಯವರು ಅಭಿಪ್ರಾಯ ಪಡುವ ಪ್ರಸ್ತಾವಗಳನ್ನು ಹೊರತುಪಡಿಸಿ.

2.ಯಾವ ಪ್ರಕರಣದಲ್ಲಿ ವಿಧಾನ ಮಂಡಲದಲ್ಲಿ ಮಂಡಿಸಬೇಕಾದ ಗೊತ್ತುವಳಿಗಳ ಬಗ್ಗೆ ಸರ್ಕಾರ ಧೋರಣೆಯನ್ನು ನಿರ್ಧರಿಸಬೇಕಾಗಿದೆಯೋ ಆ ಯಾವುದೇ ಪ್ರಕರಣ:

3.ಆದರೆ, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದು ಸಚಿವ ಸಂಪುಟದ ಅನುಮೋದನೆಯನ್ನು ಪಡೆಯುವುದು ಕಾರ್ಯಸಾಧ್ಯವಿಲ್ಲದಿದ್ದಾಗ, ಇಲಾಖೆಯ ಪ್ರಭಾರದಲ್ಲಿರುವ ಸಚಿವರ ಮತ್ತು ಮುಖ್ಯ ಮಂತ್ರಿಯವರ ಅನುಮೋದನೆ ಪಡೆದು ಸರ್ಕಾರದ ಅಂಥ ಧೋರಣೆಯನ್ನು ನಿರ್ಧರಿಸಬಹುದು

4.ವಿಧಾನ ಮಂಡಲವನ್ನು ಕರೆಯುವ ಮತ್ತು ಮುಂದೂಡುವ ವಿಧಾನ ಸಭೆಯನ್ನು ವಿಸರ್ಜಿಸುವ, ವಿಧಾನ ಪರಿಷತ್ತಿಗೆ ನಾಮನಿರ್ದೇಶನಗಳನ್ನು ಮಾಡುವ 2 [] ಮತ್ತು ಸಂಬಂಧಪಟ್ಟ ಇತರ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು.

5.ರಾಜ್ಯ ವಿಧಾನ ಮಂಡಲದ ಸದನದ ಸದಸ್ಯನು 191ನೇ ಅನುಚ್ಛೇದದ ಅಡಿಯಲ್ಲಿ ಯಾವುದೇ ಅನರ್ಹತೆಗೆ ಒಳಗಾಗಿದ್ದಾನೆಯೇ ಎಂಬುದರ ಬಗ್ಗೆ ಉದ್ಭವಿಸುವ ಪ್ರಶ್ನೆಗಳ ಮೇಲಿನ ತೀರ್ಮಾನ ಮತ್ತು ಅಂಥ ಪ್ರಶ್ನೆಗಳನ್ನು ಚುನಾವಣಾ ಆಯೋಗಕ್ಕೆ ಅದರ ಅಭಿಪ್ರಾಯಕ್ಕಾಗಿ ಕಳುಹಿಸಿಕೊಡುವ ಯಾವುದೇ ಪ್ರಸ್ತಾವಗಳು: 193ನೇ ಅನುಚ್ಚೇದದ ಅಡಿಯಲ್ಲಿ ಬಾಕಿಯಿರುವ ದಂಡವನ್ನು ವಸೂಲು ಮಾಡುವುದಕ್ಕೆ ಅಥವಾ ವಸೂಲಿಯನ್ನು ಮನ್ನಾ ಮಾಡುವುದಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವ :

6.ಆಂಗ್ಲೋ ಇಂಡಿಯನ್ ಸಮುದಾಯದ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವಗಳು.(ಅನುಚ್ಚೇದ 333):

7.252ನೇ ಅನುಚ್ಛೇದದ ಅಡಿಯಲ್ಲಿ ಗೊತ್ತುವಳಿಗಳನ್ನು ಮಂಡಿಸುವುದಕ್ಕೆ ಸಂಬAಧಿಸಿದ ಪ್ರಸ್ತಾವಗಳು.

8.258-ಎ ಅನುಚ್ಛೇದದ ಅಡಿಯಲ್ಲಿ ರಾಜ್ಯ ಸರ್ಕಾರದ ಪ್ರಕಾರ್ಯಗಳನ್ನು ಭಾರತ ಸರ್ಕಾರಕ್ಕೆ ಅಥವಾ ಅದರ ಅಧಿಕಾರಿಗಳಿಗೆ

ವಹಿಸಿಕೊಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.[“8. ಸಿಬ್ಬಂದಿ ಮುಂತಾದವರಿಗೆ ಸಂಬಂಧಪಟ್ಟ ವಾಡಿಕೆಯ ಸೂಚನೆಗಳನ್ನು ಮತ್ತು ಪ್ರಸ್ತಾವಗಳನ್ನು ಹೊರತುಪಡಿಸಿ,

9.ಚುನಾವಣಾ ಆಯೋಗದಿಂದ ಬಂದ, ಮುಖ್ಯ ಕಾಗದ ಪತ್ರಗಳು ಮತ್ತು ಅವುಗಳ ಮೇಲೆ ಕೈಗೊಳ್ಳಲು ಉದ್ದೇಶಿಸಿರುವ ಕ್ರಮ

10.ಹೊಸ ತೆರಿಗೆಯನ್ನು ವಿಧಿಸುವುದಕ್ಕೆ ಅಥವಾ ಕರನಿರ್ಧರಣೆಯ ವಿಧಾನದಲ್ಲಿ ಅಥವಾ ಹಾಲಿ ಇರುವ ತೆರಿಗೆ ದರದಲ್ಲಿ, ಭೂಕಂದಾಯ ಅಥವಾ ನೀರಿನ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಕ್ಕೆ, ರಾಜ್ಯದ ಸಾಮಾನ್ಯ ಆದಾಯದ ಭದ್ರತೆಯ ಮೇಲೆ ಸಾಗಳನ್ನು ಎತ್ತುವುದಕ್ಕೆ ಅಥವಾ ಹತ್ತು ಕೋಟಿ ರೂ.ಗಳನ್ನು ಮೀರುವ ನಿರ್ದಿಷ್ಟ ಪ್ರಸ್ತಾವದಲ್ಲಿ ಸರ್ಕಾರವು ಖಾತರಿ ನೀಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.”

11.ವಿಧಾನ ಮಂಡಲದ ಮುಂದೆ ಮಂಡಿಸಬೇಕಾದ ಸಂಬAಧಪಟ್ಟ ಕಾಗದ ಪತ್ರಗಳು ಮತ್ತು ಪೂರಕ ಬೇಡಿಕೆಗಳ ಪ್ರಸ್ತಾವಗಳೂ ಸೇರಿದಂತೆ ವಾರ್ಷಿಕ ಹಣಕಾಸು ವಿವರಣಪಟ್ಟಿ.

12.ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಥವಾ ಹಣಕಾಸು ಇಲಾಖೆ ಪ್ರಭಾರದಲ್ಲಿರುವ ಸಚಿವರು ಸಹಮತಿ ನೀಡದಿರುವ, ಅನುದಾನದೊಳಗಿನ ಮರು ಹಂಚಿಕೆಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಗಳು.

13.ಕರ್ನಾಟಕ ಭೂ ಕಂದಾಯ ಅಧಿನಿಯಮ 1964, ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳು ಅಥವಾ ಯಾವುದೇ ಇತರ ಅಧಿನಿಯಮ ಅಥವಾ ನಿಯಮಗಳು ಅಥವಾ ಸರ್ಕಾರದಿಂದ ಅನುಮೋದಿತವಾದ ಯಾವುದೇ ಸಾಮಾನ್ಯ ಯೋಜನೆಯ ಉಪಬಂಧಗಳಿಗೆ ಅನುಸಾರವಾಗಿ ಇಲ್ಲದಿದ್ದರೆ ಅಥವಾ ಅದರ ಹಣದ ಮೌಲ್ಯವು ಐವತ್ತು ಲಕ್ಷ ರೂಪಾಯಿಗಳನ್ನು ಮೀರುತ್ತಿದ್ದರೆ, ಸರ್ಕಾರದ ಸ್ವತ್ತಿನ ಮಾರಾಟ, ಮಂಜೂರಾತಿ ಅಥವಾ ಗುತ್ತಿಗೆಯ ಮೂಲಕ ತಾತ್ಕಾಲಿಕವಾಗಿ ಅಥವಾ ಖಾಯಂ ಆಗಿ ಹಾಗೆ ಪರಭಾರೆ ಮಾಡುವ ಅಥವಾ ಆದಾಯವನ್ನು ಬಿಟ್ಟುಬಿಡುವ ಅಥವಾ ಕಡಿಮೆ ಮಾಡುವುದನ್ನು ಒಳಗೊಂಡ ಪ್ರಸ್ತಾವಗಳು”]

14.ರಾಜ್ಯದ ಹಣಕಾಸುಗಳ ವಾರ್ಷಿಕ ಲೆಕ್ಕಪರಿಶೋಧನಾ ಪುನರವಲೋಕನ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮತ್ತು ಅಂದಾಜು ಸಮಿತಿಯ ವರದಿಗಳು.

15.ಸರ್ಕಾರವು ಸ್ವಪ್ರೇರಣೆಯಿಂದ ಅಥವಾ ವಿಧಾನಮಂಡಲದಲ್ಲಿ ಅಂಗೀಕರಿಸಿದ ಗೊತ್ತುವಳಿಯ ಅನುಸಾರವಾಗಿ ನೇಮಕ ಮಾಡಿದ ವಿಚಾರಣಾ ಸಮಿತಿಗಳ ವರದಿಗಳು.

16.ಐದು ಕೋಟಿ ರೂ.ಗಳನ್ನು ಮೀರಿದ ಕಾಮಗಾರಿ ಅಂದಾಜುಗಳ ಆಡಳಿತಾತ್ಮಕ ಅನುಮೋದನೆ: ಆದರೆ, ಅಂಥ ಅಂದಾಜುಗಳನ್ನು ತದನಂತರ ಪರಿಷ್ಕರಿಸಿದ್ದು, ಪರಿಷ್ಕೃತ ಅಂದಾಜುಗಳು ಮೂಲ ಅಂದಾಜುಗಳಿಗಿಂತ ಶೇಕಡಾ 25ರಷ್ಟು ಅಥವಾ ಮೂರು ಕೋಟಿ ರೂ.ಗಳಷ್ಟು, ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನೂ ಮೀರಿದರೆ, ಅದನ್ನು ಮತ್ತೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು: ಪರಂತು. ಮುಖ್ಯ ಮಂತ್ರಿಗಳು, ಪ್ರಕರಣವು ತುರ್ತು ಸ್ವರೂಪದ್ದಾಗಿದ್ದರೆ, ಯಾವ ಪ್ರಕರಣದಲ್ಲಿ ಈ ನಿಯಮದ ಮೂಲಕ ಸಚಿವ ಸಂಪುಟದ ಮುಂದೆ ಮಂಡಿಸಲು ಅನ್ಯಥಾ ಅಗತ್ಯಪಡಿಸಲಾಗಿದೆಯೋ ಆ ಪ್ರಕರಣದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಪ್ರಭಾರದಲ್ಲಿರುವ ಸಚಿವರಿಗೆ ಅನುಮತಿ ನೀಡಬಹುದು”.]

17.ಈ ಮುಂದಿನವುಗಳಿಗೆ ಸಂಬಂಧಿಸಿದ ಪ್ರಸ್ತಾವಗಳು –

(i) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು ಪೂರ್ಣ ಒಡೆತನ ಹೊಂದಿರುವ ಅಥವಾ ಭಾಗಶಃ ಹಣಕಾಸು ನೆರವು ನೀಡಿರುವ ಹೊಸ ನಿಗಮಗಳ ಅಥವಾ ಕಂಪನಿಗಳ ಸೃಜನೆ :

(i) ರಾಜ್ಯ ಸರ್ಕಾರವು ಅಥವಾ ಸಾರ್ವಜನಿಕ ವಲಯ ಉದ್ಯಮವು.

(ಎ) ಹಣಕಾಸು ಇಲಾಖೆಯು ಒಪ್ಪಿಗೆ ನೀಡದಿರುವ; ಅಥವಾ

(ಬಿ) ಈಕ್ವಿಟಿ ಭಾಗವಹಿಸುವಿಕೆಯ ಹಣದ ಮೌಲ್ಯ ಒಂದು ಕೋಟಿ ರೂ.ಗಳನ್ನು ಮೀರುವಂಥ ಅಥವಾ ಅದು ಹೊಸ ಕಂಪನಿ ಅಥವಾ ನಿಗಮದ ಷೇರು ಬಂಡವಾಳದ ಶೇ. 25ರಷ್ಟನ್ನು ಮೀರುವಂಥ – ಹೊಸ ಅಥವಾ ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಷೇರು ಬಂಡವಾಳವನ್ನು ಒದಗಿಸುವ ಮೂಲಕ ಭಾಗವಹಿಸುವುದು.

(ii) ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ದಿ ನಿಗಮದಿಂದ ಒಂದು ಕೋಟಿ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ ಎಪ್ಪತ್ತೆಂದು ಲಕ್ಷ ರೂ.ಗಳಿಗೆ ಮೀರಿದ ಷೇರು ಬಂಡವಾಳವನ್ನು ಈಗಿರುವ ನಿಗಮಕ್ಕೆ ಅಥವಾ ಕಂಪನಿಗೆ ಒದಗಿಸುವುದು;]

(iv) ಸಾರ್ವಜನಿಕ ವಲಯ ಉದ್ಯಮಗಳ ಸಮಾಪನ, ವಿಲೀನಗೊಳಿಸುವಿಕೆ ಅಥವಾ ಅವುಗಳ ರಚನೆಯಲ್ಲಿ ಮರುಸಂಘಟನೆಯ ಅಂಥ ಇತರ ಮುಖ್ಯ ಪರಿಯೋಜನೆಗಳು ;

(v) ರಾಜ್ಯದ ಒಡೆತನದಲ್ಲಿರುವ ಸಾರ್ವಜನಿಕ ನಿಗಮಗಳು, ಕಂಪನಿಗಳು, ಉದ್ಯಮಗಳು ಮತ್ತು ಯೋಜನೆಗಳ ಬಂಡವಾಳ ಹೂಡಿಕೆಯ ಅಂದಾಜುಗಳಲ್ಲಿ ಹೆಚ್ಚಳವು ಶೇಕಡಾ 50ಕ್ಕಿಂತ ಹೆಚ್ಚಾಗಿದ್ದಲ್ಲಿ ಮತ್ತು ಅಂಥ ಹೆಚ್ಚಳಕ್ಕಾಗಿ ಭಾಗಶಃ ಅಥವಾ ಪೂರ್ಣವಾಗಿ ಸರ್ಕಾರವು ಹಣ ಒದಗಿಸುವಲ್ಲಿ:

(vi) ರಾಜ್ಯದ ಒಡೆತನದಲ್ಲಿರುವ ಯಾವುದೇ ಸಾರ್ವಜನಿಕ ನಿಗಮ, ಕಂಪನಿ, ಉದ್ಯಮ ಅಥವಾ ಯೋಜನೆಯಿಂದ ಈಗಿರುವ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಹೊಸ ಯೋಜನೆಗಳನ್ನು ಸ್ಥಾಪಿಸುವುದು ಅಥವಾ ಹೊಸ ಬಗೆಯ ಉತ್ಪಾದನಾ ಮಾರ್ಗಗಳನ್ನು ಕಂಡುಕೊಳ್ಳುವುದು, ಅಂಥ ಹೊಸ ಯೋಜನೆಗಳನ್ನು ವಿಸ್ತರಿಸುವುದು ಅಥವಾ ಉತ್ಪಾದನೆಯ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಮೂರು ಕೋಟಿ ರೂ.ಗಳಿಗೆ ಕಡಿಮೆಯಿಲ್ಲದ ಯಾವುದೇ ಬಂಡವಾಳ ವೆಚ್ಚವನ್ನು ಒಳಗೊಂಡಿದ್ದಲ್ಲಿ, ಅಥವಾ ಈಗಿರುವ ಯೋಜನೆಗಳ ಅಂಥ ವಿಸ್ತರಣೆಯ ಅಥವಾ ಹೊಸ ಯೋಜನೆಗಳ ಸ್ಥಾಪನೆ ಅಥವಾ ಹೊಸ ಉತ್ಪಾದನೆಗಳ ಮಾರ್ಗಗಳನ್ನು ಕಂಡುಕೊಳ್ಳುವುದರ ಮೇಲಿನ ಬಂಡವಾಳ ವೆಚ್ಚಕ್ಕೆ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ನೀಡಿದ್ದಲ್ಲಿ ಅಥವಾ ರಾಜ್ಯ ಸರ್ಕಾರವು ಭಾಗಶಃ ಅಥವಾ ಪೂರ್ಣವಾಗಿ ಹಣಕಾಸು ಖಾತರಿ ನೀಡುವ ಮೂಲಕ ನೆರವು ನೀಡಿದ್ದಲ್ಲಿ ಅಥವಾ ಬಂಡವಾಳ ವೆಚ್ಚವು ಅಂಥ ನಿಗಮ, ಕಂಪನಿ ಅಥವಾ ಉದ್ಯಮ ಅಥವಾ ಯೋಜನೆಯ ಒಟ್ಟು ಬ್ಲಾಕ್‌ನ ಶೇಕಡಾ 25ರಷ್ಟನ್ನು ಮೀರಿದ. ಅಂಥ ಪ್ರಸ್ತಾವ)] ಮತ್ತು

(vii) ಮರುಹಣಕಾಸು ಒದಗಿಸುವ ಉದ್ದೇಶಗಳಿಗಾಗಿ ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು ವಿಧಿಸಿರುವ ಪರಿಮಿತಿಗಳನ್ನು ಮೀರಿ ಕರ್ನಾಟಕ ರಾಜ್ಯ ಕೈಗಾರಿಕಾ ಬಂಡವಾಳ ಹೂಡಿಕೆ ಮತ್ತು ಅಭಿವೃದ್ಧಿ ನಿಗಮವು ಮತ್ತು ಕರ್ನಾಟಕ ರಾಜ್ಯ ಹಣಕಾಸು ನಿಗಮವು ಸಾಲಗಳನ್ನು ಮಂಜೂರು ಮಾಡುವುದು.

  1. ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿಯನ್ನು ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವ ಅಥವಾ ತಿದ್ದುಪಡಿ ಮಾಡುವ ಪ್ರಸ್ತಾವಗಳು ಕಡಿಮೆ ಪ್ರಾಮುಖ್ಯತೆ ಉಳ್ಳವಾಗಿದ್ದ ಹೊರತು. ಅಂಥ ಪ್ರಸ್ತಾವಗಳು.

19.ಅಸಮರ್ಥತಾ ನಿವೃತ್ತಿ ವೇತನದ ಮೇಲೆ ಅಥವಾ ಜನ್ಮ ದಿನಾಂಕದ ಪರಿಷ್ಕರಣೆಯ ಪರಿಣಾಮವಾಗಿ ನಿವೃತ್ತಿ ಹೊಂದಿರುವ ಆ ವ್ಯಕ್ತಿಯನ್ನು ಮರು ನೇಮಕ ಮಾಡುವ ಅಥವಾ ಶಿಕ್ಷಣ ಇಲಾಖೆಯಲ್ಲಿ ಉಪಾಧ್ಯಾಯರನ್ನು ಶೈಕ್ಷಣಿಕ ವರ್ಷದ ಕೊನೆಯವರೆಗೆ ಮರುನೇಮಕ ಮಾಡುವ ಪ್ರಸ್ತಾವಗಳನ್ನು ಹೊರತುಪಡಿಸಿ ಪ್ರಭಾರದಲ್ಲಿರುವ ಸಚಿವರು ಅನುಮೋದಿಸಿದ. ನಿವೃತ್ತಿ ಹೊಂದಿದ ವ್ಯಕ್ತಿಯ ಮರು ನೇಮಕ ಮಾಡುವ ಅಥವಾ ಕಡ್ಡಾಯ ನಿವೃತ್ತಿಯ ದಿನಾಂಕದ ನಂತರ ಸರ್ಕಾರಿ ನೌಕರನನ್ನು ಸೇವೆಯಲ್ಲಿ ಉಳಿಸಿಕೊಳ್ಳುವ ಪ್ರಸ್ತಾವಗಳು.

20.(ಎ) ಸರ್ಕಾರವು ಪ್ರಮುಖ ಹಣಕಾಸು ಹಿತಾಸಕ್ತಿಯನ್ನು ಹೊಂದಿರುವ ಸರ್ಕಾರದ ಮಾಲೀಕತ್ವಕ್ಕೆ ಒಳಪಟ್ಟಿರುವ ಅಥವಾ ಸರ್ಕಾರದ

ನಿಯಂತ್ರಣಕ್ಕೆ ಒಳಪಟ್ಟಿರುವ ಶಾಸನಬದ್ಧ / ಶಾಸನ ಬದ್ಧವಲ್ಲದ ಸಂಸ್ಥೆಗಳಲ್ಲಿ, ಕಂಪನಿಗಳಲ್ಲಿ, ನಿಗಮಗಳಲ್ಲಿ ಮುಂತಾದವುಗಳಲ್ಲಿ ತಮ್ಮ ನಿವೃತ್ತಿಯ ನಂತರ ಮರುನೇಮಕಗೊಳ್ಳಲು ಉದ್ದೇಶಿಸುವ ಗೆಜೆಟೆಡ್ ಸರ್ಕಾರಿ ನೌಕರರಿಗೆ ಅನುಮತಿ ನೀಡುವ; ಅಥವಾ (ಬಿ) ಮೇಲೆ (ಎ) ನಲ್ಲಿ ಉಲ್ಲೇಖಿಸಲಾದ ಸಂಸ್ಥೆಗಳಲ್ಲಿ ನಿವೃತ್ತ ಗೆಜಿಟೆಡ್ ಸರ್ಕಾರಿ ನೌಕರರ ಮರುನೇಮಕದ ಪ್ರಸ್ತಾವಗಳು.

21.ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳ ನೇಮಕಾತಿಯನ್ನು ಮತ್ತು ಸೇವಾ ಷರತ್ತುಗಳನ್ನು ನಿಯಂತ್ರಿಸುವ ನಿಯಮಗಳನ್ನು ರಚಿಸುವುದಕ್ಕಾಗಿ ಅಥವಾ ತಿದ್ದುಪಡಿ ಮಾಡುವ ಪ್ರಸ್ತಾವಗಳನ್ನು ಹೊರತುಪಡಿಸಿ] ನೇಮಕಗಳ ಬಗ್ಗೆ ಅಥವಾ ಯಾವ ಪ್ರಕರಣಗಳಲ್ಲಿ ಇತರ ಪ್ರಮುಖ ಕ್ರಮಗಳ ಬಗ್ಗೆ ಲೋಕಸೇವಾ ಆಯೋಗದೊಂದಿಗೆ ಸಮಾಲೋಚಿಸಲಾಗಿದೆಯೋ ಆ ಪ್ರಕರಣಗಳಲ್ಲಿ, ಲೋಕಸೇವಾ ಆಯೋಗವು ನೀಡಿರುವ ಶಿಫಾರಸ್ಸಿಗೆ ಅಸಂಗತವಾಗಿರುವ ಪ್ರಸ್ತಾವಗಳು,

22.ಸರ್ಕಾರಿ ನೌಕರನ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಪಟ್ಟಂತೆ [ಲೋಕಾಯುಕ್ತರು ಅಥವಾ ಉಪಲೋಕಾಯುಕ್ತ] ಮಾಡಿರುವ ಶಿಫಾರಸ್ಸಿಗೆ ಅಸಂಗತವಾದ ಪ್ರಸ್ತಾವಗಳು.[ಲೋಕಾಯುಕ್ತ ಅಥವಾ ಉಪಲೋಕಾಯುಕ್ತ] ರ ವಾರ್ಷಿಕ ವರದಿ[ಅನಧಿಕೃತ ಗೈರುಹಾಜರಿಯ ಆರೋಪವು ರುಜುವಾತಾದುದಕ್ಕಾಗಿ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು)

ನಿಯಮಗಳು, 1957ರ ಪ್ರಕಾರ, ವಜಾ ಮಾಡುವ ಅಥವಾ ತೆಗೆದುಹಾಕುವ ಅಥವಾ ಕಡ್ಡಾಯವಾಗಿ ನಿವೃತ್ತಿಗೊಳಿಸುವ ದಂಡನೆಗಳನ್ನು ವಿಧಿಸುವ ಪ್ರಸ್ತಾವಗಳನ್ನು ಹೊರತುಪಡಿಸಿ.] [ಸಮೂಹ ಎ ಅಥವಾ ಸಮೂಹ ಬಿ ಹುದ್ದೆಗಳನ್ನು ಧಾರಣ ಮಾಡಿರುವ

23.ಯಾರೇ ಅಧಿಕಾರಿಗಳನ್ನು 311ನೇ ಅನುಚ್ಛೇದದ ಮೇರೆಗೆ ವಜಾ ಮಾಡುವುದಕ್ಕೆ, ತೆಗೆದುಹಾಕುವುದಕ್ಕೆ ಅಥವಾ ಕಡ್ಡಾಯವಾಗಿ

ನಿವೃತ್ತಿಗೊಳಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.

  1. ಲೋಕ ಸೇವಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ (ಅನುಚ್ಚೇದ 323(2)) ವರದಿ ಮತ್ತು ಅದಕ್ಕೆ ಸಂಬಧಪಟ್ಟಂತೆ ಕೈಗೊಳ್ಳಲು ಪ್ರಸ್ತಾವಿಸಿರುವ ಯಾವುದೇ ಕ್ರಮ.

25.ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವಗಳು.

26.ಅಡ್ವಕೇಟ್ ಜನರಲ್‌ರವರ ನೇಮಕಕ್ಕೆ ಅಥವಾ ತೆಗೆದು ಹಾಕುವುದಕ್ಕೆ ಅಥವಾ ಅವರಿಗೆ ಸಂದಾಯ ಮಾಡಬೇಕಾದ ಸಂಭಾವನೆಯನ್ನು ನಿರ್ಧರಿಸುವುದಕ್ಕೆ ಅಥವಾ ವ್ಯತ್ಯಾಸ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವಗಳು.

27.ಮುಖ್ಯ ಕಾರ್ಯದರ್ಶಿಯವರ ನೇಮಕ.

28.ಕಾರ್ಯನೀತಿಯಲ್ಲಿ ಅಥವಾ ಪದ್ಧತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆಯನ್ನು ತರುವ ಪ್ರಸ್ತಾವಗಳು.

29.ಮುಖ್ಯ ಕಾರ್ಯದರ್ಶಿಯವರ ಅಥವಾ ಯಾವುದೇ ಇಲಾಖೆಯ ಕಾರ್ಯದರ್ಶಿಯವರ ಗಮನಕ್ಕೆ ಬರುವ, ಈ ನಿಯಮಗಳನ್ನು ಕೈ ಬಿಟ್ಟಿರುವುದು.

30.ಕಾನೂನು,ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ನೀಡಿದ ಸಲಹೆಗೆ ವಿರುದ್ಧವಾಗಿ ಸರ್ಕಾರವು ಯಾವುದೇ ಕಾನೂನು ವ್ಯವಹರಣೆಯನ್ನು ಹೂಡುವುದಕ್ಕೆ ಅಥವಾ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವಗಳು.

31.ಯಾರೇ ಹಿಂದಿನ ರಾಜರ ಹಕ್ಕುಗಳು ಮತ್ತು ವಿಶೇಷ ಸವಲವತ್ತುಗಳ ಮೇಲೆ ಪರಿಣಾಮ ಬೀರುವ ಅಥವಾ ಬಾಧಕ ಉಂಟು ಮಾಡುವ
ಸಂಭವವಿರುವ ಪ್ರಕರಣಗಳು.

32.ರಾಜ್ಯಾಡಳಿತ ವರದಿಗಳನ್ನು ಪ್ರಕಟಿಸುವ ಮುಂಚೆ ಅವುಗಳನ್ನು ಪುನರ್ ಪರಿಶೀಲಿಸುವುದು.

33.ಸಚಿವ ಸಂಪುಟವು ಈಗಾಗಲೇ ಕೈಗೊಂಡಿರುವ ತೀರ್ಮಾನಗಳನ್ನು ಮಾರ್ಪಾಟು ಮಾಡುವುದನ್ನು, ವ್ಯತ್ಯಾಸ ಮಾಡುವುದನ್ನು ಅಥವಾ ವಿಪರ್ಯಯಗೊಳಿಸುವುದನ್ನು ಅಗತ್ಯಪಡಿಸುವಂಥ ಪ್ರಕರಣಗಳು.

34.ಕೇಂದ್ರ ಸರ್ಕಾರವು ನಿರೂಪಿಸಿರುವ ನೀತಿಯನ್ನು ಜಾರಿಗೆ ತರುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪ್ರಸ್ತಾವಗಳು.

35.ಕರ್ನಾಟಕ ಭೂ ಸುಧಾರಣಾ ಅಧಿನಿಯಮ, 1961ರ 109ನೇ ಪ್ರಕರಣದ (1ಎ) ಉಪ ಪ್ರಕರಣ ಮೇರೆಗೆ.

36.ಸದರಿ ಉಪ ಪ್ರಕರಣದ ಪರಂತುಕದ ಮೇರೆಗೆ ಜಿಲ್ಲಾಧಿಕಾರಿಯು ರಾಜ್ಯ ಸರ್ಕಾರದ ಅಧಿಕಾರಗಳನ್ನು ಚಲಾಯಿಸಬಹುದಾದ

ಪ್ರಕರಣಗಳನ್ನು ಹೊರತುಪಡಿಸಿ ವಿನಾಯಿತಿ ಮಂಜೂರು ಮಾಡುವ ಎಲ್ಲಾ ಪ್ರಸ್ತಾವಗಳು

37.ನಗರಾಭಿವೃದ್ಧಿ ಪ್ರಾಧಿಕಾರಗಳು, ಕರ್ನಾಟಕ ಗೃಹ ಮಂಡಲಿ ಮತ್ತು ಅಂಥ ಇತರ ಶಾಸನಬದ್ಧ ಸಂಸ್ಥೆಗಳು ಒಳಗೊಂಡಂತೆ ಸ್ಥಳೀಯ ಸಂಸ್ಥೆಗಳ ಎಲ್ಲ ಸ್ವಯಂ ಹಣಕಾಸು ನೆರವಿನ ಯೋಜನೆಗಳು.

38.21ನೇ ನಿಯಮದಲ್ಲಿ ಉಲ್ಲೇಖಿಸಲಾದ ಅಧಿಕಾರ ಪಡೆದ ಸಮಿತಿಯ ತೀರ್ಮಾನಗಳ ಪ್ರತಿಯೊಂದ ತಃಖ್ಯೆಯನ್ನು ಕಡೇ ಪಕ್ಷ 6 ತಿಂಗಳಿಗೆ ಒಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸತಕ್ಕದ್ದು.

ಕೃಪೆ: ಶಶಿಕುಮಾರ್ ಪಿ.ಎಂ ಸಚಿವಾಲಯ.

CLICK HERE TO DOWNLOAD PDF

WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!